Header Ads
Header Ads
Header Ads
Breaking News

ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ ನಡಾವಳಿ ವಿರುದ್ಧ ಸದಸ್ಯರ ಅಸಮಾಧಾನ ಸಾಮಾನ್ಯ ಸಭೆಯಿಂದ ಹೊರ ನಡೆದ ಸದಸ್ಯ

ಕಾರ್ಕಕ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಾರೀ ಗದ್ದಲಕ್ಕೆ ಕಾರಣವಾಯಿತು. ಇನ್ನೂ ಶಿಸ್ತು, ಸಂಯಮವಿಲ್ಲದೆ ಸಂತೆ ಮಾರುಕಟ್ಟೆಯಾಗಿರುವ ಸಾಮಾನ್ಯ ಸಭೆಯ ನಡೆತೆಯ ಬಗ್ಗೆ ಸುಭಿತ್ ಎನ್. ಆರ್. ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಅಶ್ಫಕ್ ಅಹ್ಮದ್ ಸಭೆಯ ಅಜೆಂಡಾಕ್ಕೆ ಹೋಗದೆ, ವಿನಾಕಾರಣ ಸಮಯ ಕಳೆಯುವುದು ಸರಿಯಲ್ಲ. ಇದರಿಂದ ನಮ್ಮ ಮಾನ ಮರ್ಯಾದೆ ಹರಾಜಾಗುತ್ತಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಈ ನಡುವೆ ಸದಸ್ಯನೋರ್ವ ತೆಂಗಿನ ಕಾಯಿ ಪ್ರದರ್ಶನ ಮಾಡಿದರು. ಕಳೆದ ಮಾಸಿಕ ಸಭೆಯಲ್ಲಿ ದಿನಗೂಲಿ ನೌಕರನೊಬ್ಬ ಅಧ್ಯಕ್ಷರ ಹೆಸರಿನಡಿ ಹಣದ ಬೇಡಿಕೆ ಮುಂದಿಟ್ಟಿದ್ದೇನೆ ಎಂದು ನನ್ನ ಮೇಲೆ ಆರೋಪಿಸಿದ್ದಾನೆ.ಆತ ಹಾಗೂ ಈ ಷಡ್ಯಂತ್ರದ ಹಿಂದಿರುವ ಪ್ರತಿಯೊಬ್ಬರೂ ಅನುಭವಿಸಬೇಕು ಎಂದು ಪ್ರಕಾಶ್ ರಾವ್ ಸಭೆ ಆರಂಭದಲ್ಲೇ ಹೇಳಿ ಬಳಿಕ ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡು ಅಲ್ಲೇ ಮುಂಭಾಗದ ಮಾರಿಯಮ್ಮ ದೇಗುಲಕ್ಕೆ ನಡೆದರು. ಇದು ಎಲ್ಲರಿಗೂ ಆಶ್ಚರ್ಯ ಮೂಡಿಸಿತು. ಇನ್ನೂ ಡ್ರೈವಿಂಗ್ ಸ್ಕೂಲ್‌ನ ಕುರಿತು ಟೆಂಡರ್ ಪ್ರಕ್ರಿಯೆ ನಡೆಸದೆ, ಗುತ್ತಿಗೆ ಕೊಡಲಾಗಿದೆ ಎಂದ ಸದಸ್ಯನೋರ್ವ ಆರೋಪಿಸಿದರು. ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಷಯ್ ರಾವ್, ಮುಖ್ಯಾಧಿಕಾರಿ ಮೇಬಲ್ ಡಿಸೋಜ ಉಪಸ್ಥಿತರಿದ್ದರು.

Related posts

Leave a Reply