Header Ads
Header Ads
Breaking News

ಕಾರ್ಕಳ : 4 ವರ್ಷ ಕಳೆದರೂ ನಿರ್ಮಾಣವಾಗಿಲ್ಲ ಅಂಬೇಡ್ಕರ್ ಭವನ , ಅಣ್ಣಪ್ಪ ನಕ್ರೆ ಅಧಿಕಾರಿಗಳ ವಿರುದ್ದ ಅಕ್ರೋಶ

4ವರ್ಷ ಕಳೆದರೂ ಅಂಬೇಡ್ಕರ್ ಭವನ ನಿರ್ಮಾಣವಾಗಿಲ್ಲ. ಅಂಬೇಡ್ಕರ್ ಭವನ ನಿರ್ಮಿಸುವಲ್ಲಿ ಅಧಿಕಾರಿಗಳಿಗೆ ಅಸಕ್ತಿ ಇಲ್ಲ. ಇದು ಅಂಬೇಡ್ಕರ್ ಹಾಗೂ ಪರಿಶಿಷ್ಟಜಾತಿ, ಪ.ಪಂಗಡದವರಿಗೆ ಮಾಡಿದ ಅವಮಾನ ಎಂದುವ್ಯಕ್ತಪಡಿಸಿದ್ದಾರೆ.

ಅವರು ತಾಲೂಕು ಕಚೇರಿಯಲ್ಲಿ ತಾಹಸಿಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಪ.ಜಾತಿ /ಪ. ಪಂಗಡಕುಂದು ಕೊರೆತೆ ಸಭೆಯಲ್ಲಿ ಮಾತನಾಡಿ. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ನೀಡಿದ ಏಜೆನ್ಸಿ ಅನುದಾನ ಕುರಿತಂತೆ ಮತ್ತೊಮ್ಮೆ ಸಮಾಜ ಕಲ್ಯಾಣ ಇಲಾಖೆ ಉಡುಪಿಗೆ ಪತ್ರ ಬರೆಯುವಂತೆ ಸೂಚಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ ಟೆಂಡರ್ ಪ್ರಕಿಯೆ ಬಾಕಿ ಇದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಕೆಲಸ ನಡೆಯಲಿದೆ ಎಂದರು. ಪಳ್ಳಿಗ್ರಾಮದ ಮದಮ್ಮಲ್ ಗಣಿಗಾರಿಕೆಯ ಅಬ್ಬರಕ್ಕೆ ಸ್ಥಳಿಯ ಮನೆಗಳ ಗೋಡೆ ಗಳು ಬೀರಿಕು ಬಿಟ್ಟಿದ್ದು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಈಬಾಗದಲ್ಲಿ ಓಡಾಟ ನಡೆಸುವುದು ಕಷ್ಟಕರವಾಗಿದೆ ಕೂಡಲೇ ಸಂಬಂದ ಪಟ್ಟ ವರಿಗೆ ನೋಟಿಸ್ ನೀಡುವಂತೆ ಮಾಜಿ ಜಿಲ್ಲಾ ಪಂ ಸದಸ್ಯ ಬಾಬುರವರು ತಿಳಿಸಿದರು. ತಾಹಸಿಲ್ದಾರ್ ಮಾತನಾಡಿ ಈಗಾಗಲೇ ಸ್ಥಳಕ್ಕೆ ಬೇಟಿ ನೀಡಿದ್ದು ಸ್ಫೋಟಕವನ್ನು ಬಳಸದಂತೆ ಎಚ್ಚರಿಕೆ ನೀಡಲಾಗುದು ಹಾಗೂ ಗಣಿ ಇಲಾಖೆಗೆ ಈ ಬಗ್ಗೆ ಪತ್ರ ಬರೆಯುವುದಾಗಿ ತಿಳಿಸದರು. ತಾಲೂಕು ಕಚೇರಿಯಲ್ಲಿ ಮದ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕರು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಮದ್ಯವರ್ತಿಗಳನ್ನೇ ಅವಲಂಬಿಸುವಂತಾಗಿದೆ ಇದಕ್ಕೆ ಕಡಿವಾಣ ಹಾಕುವಂತೆ ಶ್ರೀನಿವಾಸ ಕಾರ್ಕಳ ಒತ್ತಾಯಿಸಿದರು.ಎಲ್ಲಾ ಇಲಾಖೆ ಅಧಿಕಾರ ಉಗಮ ಉಪಸ್ಥಿತರಿದ್ದರು.

Related posts

Leave a Reply