Header Ads
Breaking News

ಕಾರ್ಮಿಕ ವಿರೋಧಿ ಸಂಹಿತೆಗಳ ರದ್ದತಿಗೆ ಆಗ್ರಹ : ಕುಂದಾಪುರಕ್ಕೆ ತಲುಪಿದ ವಾಹನ ಜಾಥಾ

ರೈತ ವಿರೋಧಿ ಮಸೂದೆ, ಕಾರ್ಮಿಕ ವಿರೋಧಿ ಸಂಹಿತೆಗಳ ರದ್ದತಿಗೆ ಆಗ್ರಹಿಸಿ, ರೈತ, ಕೂಲಿ, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರು, ದಲಿತ ಹಾಗೂ ಆದಿವಾಸಿ ಸಂಘಟನೆಗಳ ಆಶ್ರಯದಲ್ಲಿ ಜನಜಾಗೃತಿಗಾಗಿ ರಾಜ್ಯಾದ್ಯದಂತ ಹಮ್ಮಿಕೊಂಡಿರುವ ವಾಹನ ಜಾಥಾವು ಕುಂದಾಪುರಕ್ಕೆ ಆಗಮಿಸಿತು.


ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರ್ಯ, ಕೇಂದ್ರ ಸರಕಾರವು ಪ್ರಜಾಪ್ರಭುತ್ವದ ಹೆಸರಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಉದ್ಯಮಿಗಳು,ಕಾರ್ಪೋರೇಟರ್ ವರ್ಗಕ್ಕೆ ಅನುಕೂಲ ಮಾಡಿಕೊಟ್ಟು, ಬಡವರು, ಕೂಲಿ ಕಾರ್ಮಿಕರು, ರೈತರು, ದುಡಿಯುವ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ. ಈ ಮಸೂದೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ನವೆಂಬರ್‍ನಿಂದ ನಡೆಯುತ್ತಿರುವ ರೈತರ ಈ ಪ್ರತಿಭಟನೆಯನ್ನು ಜಗತ್ತೇ ಗಮನಿಸುತ್ತಿದೆ ಎಂದರು. ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ಮುಖಂಡ ವೆಂಕಟೇಶ್ ಕೋಣಿ, ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಎಚ್. ನರಸಿಂಹ, ರಾಜೇಶ ವಡೇರಹೋಬಳಿ, ಶ್ರೀಧರ ನಾಡ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *