
ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವ ನಾಗರಾಜ್ ಕಾರ್ವಿ ಅವರು, ಮಂಗಳೂರಿನ ತಣ್ಣೀರು ಬಾವಿಯ ಅರಬ್ಬಿ ಸಮುದ್ರದಲ್ಲಿ ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಬ್ರೆಷ್ಟ್ ಸ್ಟ್ರೋಕ್ನಲ್ಲಿ 25 ನಿಮಿಷ 16 ಸೆಕೆಂಡ್ 63 ಮಿಲಿ ಸೆಕೆಂಡ್ನಲ್ಲಿ ತಲುಪಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಹಾಗೂ ಈಜು ಮತ್ತು ಯೋಗದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳದ ಕಲ್ಮಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾಗರಾಜ ಖಾರ್ವಿ ಕಂಚುಗೋಡು ಅವರು ಇಂದು ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ತಣ್ಣೀರು ಬಾವಿಯ ಅರಬ್ಬಿ ಸಮುದ್ರದಲ್ಲಿ ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಬ್ರೆಷ್ಟ್ ಸ್ಟ್ರೋಕ್ನಲ್ಲಿ ತಣ್ಣೀರುಬಾವಿಯ ಅರಬ್ಬಿ ಸಮುದ್ರದಲ್ಲಿ 25 ನಿಮಿಷ 16 ಸೆಕೆಂಡಿನಲ್ಲಿ ಈ ದಾಖಲೆ ಬರೆದಿದ್ದಾರೆ ಬೆಳಗ್ಗೆ 8:55ಕ್ಕೆ ತಣ್ಣೀರುಬಾವಿಯ ದಡದಿಂದ ಈಜು ಆರಂಭಿಸಿದ ಅವರು 9:20ಕ್ಕೆ ಮರಳಿ ದಡ ಸೇರಿದ್ದಾರೆ.