Header Ads
Header Ads
Breaking News

ಕಾವೂರಿನ ಸರಕಾರಿ ಪದವಿ ಕಾಲೇಜಿಗೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಿಕ್ಕ ಜಯ

ಮಂಗಳೂರಿನ ಕಾವೂರು ಸರಕಾರಿ ಪದವಿ ಕಾಲೇಜಿನಲ್ಲಿ ಎಂ ಆರ್ ಪಿ ಎಲ್ ವತಿಯಿಂದ ಸಿಎಸ್‌ಆರ್ ನಿಧಿಯಿಂದ ಸುಮಾರು ೨.೫ಲಕ್ಷ ರೂ. ವೆಚ್ಚದಲ್ಲಿ ನೂತನ ನೀರಿನ ಟ್ಯಾಂಕ್ ನಿರ್ಮಿಸಿದ್ದು, ಇಂದು ಶಾಸಕ ಡಾ.ಭರತ್ ಶೆಟ್ಟಿ ವೈ ಉದ್ಘಾಟಿಸಿದರು.

ಈ ಸಂಸರ್ಭ ಮಾತನಾಡಿದ ಶಾಸಕರು ಕಾಲೇಜು ಎತ್ತರದ ಪ್ರದೇಶದಲ್ಲಿ ಇರುವುದರಿಂದ ನೀರಿನ ಸಮಸ್ಯೆ ಇತ್ತು. ಮಕ್ಕಳು ಒಂದು ಭಾರಿ ಪ್ರತಿಭಟನೆ ನಡೆಸಿದ್ದರು.ಇದನ್ನು ಮನಗಂಡು ಎಂ ಆರ್ ಪಿ ಎಲ್ ನ್ನು ಸಂಪರ್ಕಿಸಿದಾಗ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಇದೀಗ ಕಾಲೇಜಿನ ಸಮಸ್ಯೆ ನಿವಾರಣೆ ಆದಂತಾಗಿದೆ.ಇದಕ್ಕಾಗಿ ಎಂ ಆರ್ ಪಿ ಎಲ್ ಗೆ ಅಭಿನಂದನೆಗಳು ಎಂದರು.
ಸಂಸ್ಥೆಯ ಸಿ ಎಸ್ ಆರ್ ವಿಭಾಗದ ಜಿ ಜಿ ಎಂ ಬಿ ಎಚ್ ವಿ ಪ್ರಸಾದ್, ಚೀಫ್ ಮ್ಯಾನೇಜರ್ ವೀಣಾ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶೋಭಾ ಎಂ.ಕೆ, ಪದವಿ ಕಾಲೇಜಿನ ಪ್ರಾಂಶುಪಾಲೆ ತಾರಾ ,ಕಾಲೇಜಿನ ಅಭಿವೃದ್ಧಿ ಸಮಿತಿಯ ಸುಧಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *