Header Ads
Breaking News

ಕಾಸರಗೋಡಿನಲ್ಲಿ ಕೊರೊನಾ ಹೊಸ ಪ್ರಕರಣ ಇಲ್ಲ : ಕೊರೊನಾ ಸೊಂಕಿತ ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್

ಜಿಲ್ಲೆಯಲ್ಲಿ ಸತತ ಏಳನೇ ದಿನವಾದ ಗುರುವಾರ ಕೂಡಾ ಹೊಸದಾಗಿ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ. ಇದೇ ವೇಳೆ ಇಬ್ಬರು ಗುಣಮುಖ ರಾಗಿದ್ದಾರೆ. ಜಿಲ್ಲೆಯ ಆಸ್ಪತ್ರೆಯಲ್ಲಿ ಒಬ್ಬರು ಗುಣಮುಖರಾಗಲು ಬಾಕಿ ಇದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಚೆಂಗಳ ಪಂಚಾಯತ್ ಚೆಮ್ನಾಡ್ ಪಂಚಾಯತ್ ಮಾತ್ರವೇ ಹಾಟ್‍ಸ್ಪಾಟ್ ಯಾದಿಯಲ್ಲಿವೆ. ಕೇರಳದಲ್ಲಿ ಸತತ ಎರಡನೇ ದಿನವಾದ ಗುರುವಾರ ಹೊಸದಾಗಿ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ. ಇದೇ ಸಂದರ್ಭದಲ್ಲಿ ಐದು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೇವಲ 25 ಮಂದಿ ಮಾತ್ರವೇ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ತನಕ ಮೂವರು ಮಾತ್ರ ಸಾವಿಗೀಡಾಗಿದ್ದಾರೆ.

Related posts

Leave a Reply

Your email address will not be published. Required fields are marked *