Header Ads
Breaking News

ಕಾಸರಗೋಡಿನಲ್ಲಿ ಬುಧಾವಾರವೂ ಯಾವುದೇ ಪ್ರಕರಣಗಳಿಲ್ಲ

ಕಾಸರಗೋಡು: ರಾಜ್ಯದಲ್ಲಿ ಬುಧವಾರ ಯಾವುದೇ ಕೊರೊನಾ ಪಾಸಿಟಿವ್ ಬಾಧಿತರು ಖಚಿತಗೊಂಡಿಲ್ಲ. 502 ಮಂದಿ ಕೊರೊನಾ ಬಾಧಿತರ ಪೈಕಿ 469 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. 30 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಏಳು ಮಂದಿ ಗುಣಮುಖರಾಗಿದ್ದಾರೆ.ಅದೇ ರೀತಿ ಕೇರಳ ರಾಜ್ಯದಲ್ಲಿ ಬುಧವಾರ ಹೊಸದಾಗಿ ಕೊರೊನಾ ವೈರಸ್ ಸೋಂಕು ಪ್ರಕರಣ ಇಲ್ಲ. ಅದೇ ಸಂದರ್ಭದಲ್ಲಿ 7ಮಂದಿ ಗುಣಮುಖರಾಗಿದ್ದಾರೆ. ಕೋಟ್ಟಯಂನಲ್ಲಿ 6 ಮತ್ತು ಪತ್ತನಂತಿಟ್ಟದಲ್ಲಿ 1 ಗುಣಮುಖ ರಾಗಿದ್ದಾರೆ. ಕೇರಳ ರಾಜ್ಯದಲ್ಲಿ ಈ ತನಕ 502 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿತ್ತು. ಇದೀಗ ವಿವಿಧ ಆಸ್ಪತ್ರೆಗಳಲ್ಲಾಗಿ 30 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 14670 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 14402 ಮಂದಿ ಮನೆಯಲ್ಲೂ, 268 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದಲ್ಲಿರುವುದಾಗಿ ಮುಖ್ಯ ಮಂತ್ರಿ ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಆರು ಜಿಲ್ಲೆಗಳು ಮಾತ್ರ ಕೋವಿಡ್ ರೋಗ ನಿಬರ್ಂಧ ವಿಧಿಸಲಾಗಿದೆ. ಕೋವಿಡ್ ವ್ಯಾಪ್ತಿಯಲ್ಲಿ 8 ಜಿಲ್ಲೆಗಳು ಹೊಸ ಹಾಟ್ ಸ್ಪಾಟ್ ಇಲ್ಲದಿರುವುದರಿಂದ ರಾಜ್ಯವು ನಿರಾಳವಾಗಿದೆ. ಕೋವಿಡ್ ಮುಕ್ತವಾಗಿ ಎಂಟು ಜಿಲ್ಲೆಗಳನ್ನು ಈ ಮೂಲಕ ಘೋಷಿಸಲಾಗಿದೆ.

Related posts

Leave a Reply

Your email address will not be published. Required fields are marked *