Header Ads
Header Ads
Breaking News

ಕಾಸರಗೋಡಿನಿಂದ ತಲಪಾಡಿವರೆಗೆ ರಸ್ತೆ ದುರಸ್ಥಿಪಡಿಸದಿದ್ದರೆ ಮುಷ್ಕರ : ಆಂಬ್ಯುಲೆನ್ಸ್ ಸೇವಾ ಸಂಘಟನೆ ಎಚ್ಚರಿಕೆ

ಮಂಜೇಶ್ವರ : ಹೊಂಡಗಳು ತುಂಬಿ ಸಂಚಾರಕ್ಕೆ ಯೋಗ್ಯವಲ್ಲದ ಕಾಸರಗೋಡಿನಿಂದ ತಲಪಾಡಿ ತನಕ ಇರುವ ರಾಷ್ತ್ರೀಯ ಹೆದ್ದಾರಿಯನ್ನು ಕೂಡಲೇ ದುರಸ್ತಿ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ಜಿಲ್ಲೆಯಲ್ಲೇ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಇಳಿಯುವುದಾಗಿ ಆಂಬ್ಯುಲೆನ್ಸ್ ಓನರ್ಸ್ ಆಂಡ್ ಡ್ರೈವರ್ಸ್ ಅಸೋಶಿಯೇಶನ್ ಜಿಲ್ಲಾಧ್ಯಕ್ಷ ಮುನೀರ್ ಚೆಮ್ನಾಡ್ ಎಚ್ಚರಿಸಿದ್ದಾರೆ.ಅವರು ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿ ರಸ್ತೆ ಸರಿಯಾಗಿರುವಾಗ ಅರ್ಧ ಗಂಟೆಯಲ್ಲಿ ರೋಗಿಯನ್ನು ಮಂಗಳೂರಿಗೆ ತಲುಪಿಸುತಿದ್ದ ಆಂಬ್ಯುಲೆನ್ಸ್ ಚಾಲಕರಿಗೆ ಇದೀಗ ರಸ್ತೆ ಸರಿ ಇಲ್ಲದ ಕಾರಣ ಎರಡು ತಾಸಿಗಿಂತಲೂ ಅಧಿಕ ಸಮಯ ತಗಲುತ್ತಿರುವುದಾಗಿ ಅವರು ಹೇಳಿದರು. ಗಂಭೀರಾವಸ್ಥೆಯಲ್ಲಿರುವ ರೋಗಿಗಳು ದಾರಿ ಮಧ್ಯೆದಲ್ಲೇ ಕೊನೆಯುಸಿರೆಳೆದ ಘಟನೆಗೂ ಕಾರಣವಾಗುತ್ತಿರುವುದಾಗಿಯೂ ಅವರು ಹೇಳಿದರು. ಅದೇ ರೀತಿ ತಲಪಾಡಿಯಲ್ಲಿರುವ ಟೋಲ್ ಗೇಟ್ ಸಿಬ್ಬಂದಿ ರೋಗಿಯನ್ನು ಕೊಂಡೊಯ್ಯುತ್ತಿರುವ ಆಂಬ್ಯುಲೆನ್ಸ್ ಸಾಗಬೇಕಾದ ಫಾಸ್ಟ್ ಟ್ರೇಕ್‌ನಲ್ಲಿ ಬೇರೆ ವಾಹನಗಳನ್ನು ಬಿಡುತ್ತಿರುವುದು ಆಸ್ಪತ್ರೆಗೆ ತಲುಪಲು ಇನ್ನಷ್ಟು ವಿಳಂಭಕ್ಕೆ ಕಾರಣವಾಗುತ್ತಿರುವುದಾಗಿಯೂ ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಅಸ್ಲಂ ಕುಂಜತ್ತೂರು, ತೌಫೀಕ್, ರಾಜೇಶ್, ರಿಯಾಝ್ ಉಪ್ಪಳ, ಅದ್ನಾನ್ ಕುಂಜತ್ತೂರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *