Header Ads
Header Ads
Breaking News

ಕಾಸರಗೋಡಿನ ಶಾಲಾ ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲ

ಮಂಜೇಶ್ವರ : ಕಾಸರಗೋಡು ಜಿಲ್ಲಾ ಪಂಚಾಯತ್‌ನ ನಿಧಿಯಿಂದ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿನಿಗಳಿಗಾಗಿ ನಿರ್ಮಿಸಲಾದ ಮೂರು ಶೌಚಾಲಯಗಳಿಗೆ ಬಾಗಿಲುಗಲೇ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ.ಕಾಸರಗೋಡು ಜಿಲ್ಲಾ ಪಂಚಾಯತ್‌ನ ನಿಧಿಯಿಂದ ಐದು ಲಕ್ಷ ರೂ. ವೆಚ್ಚದಲ್ಲಿ ಬಂಗ್ರ ಮಂಜೇಶ್ವರ, ಉದ್ಯಾವರ ಗುಡ್ಡೆ ಹಾಗೂ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಗಳಲ್ಲಿ ವಿದ್ಯಾರ್ಥಿನಿಗಳಿಗಾಗಿ ನಿರ್ಮಿಸಲಾದ ಶೌಚಾಲಯಗಳಿಗೆ ಬಾಗಿಲುಗಳನ್ನು ಮಾಡದೇ ಇರುವುದರಿಂದ ಇಷ್ಟೊಂದು ಮೊತ್ತದ ಹಣದಲ್ಲಿ ನಿರ್ಮಿಸಲಾದ ಶೌಚಾಲಯ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

 

ಈ ಬಗ್ಗೆ ಆಯಾ ಶಾಲೆಗಳ ಮುಖ್ಯೋಪಧ್ಯಾಯರು ಇಂಜಿನಿಯರ್ ನ ಗಮನಕ್ಕೆ ತಂದಿದ್ದರೂ ಸ್ಪಂದಿಸಿಲ್ಲ.ಇದೀಗ ಜಿಲ್ಲಾ ಪಂಚಾಯತ್ ಕಾರ್ಯಕರಿ ಸಮಿತಿ ಸಭೆಯಲ್ಲಿ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಇಂಜಿನಿಯರ್‌ನ ವಿರುದ್ದ ಕಿಡಿಕಾರಿದ ಕಾಸರಗೋಡು ಜಿಲ್ಲಾ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಆತನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸುವುದರೊಂದಿಗೆ ಕೂಡಲೇ ಶೌಚಾಲಯಗಳಿಗೆ ಬಾಗಿಲು ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

Related posts

Leave a Reply