Header Ads
Breaking News

ಕಾಸರಗೋಡಿನ ಸೌರ ವಿದ್ಯುತ್ ಯೋಜನೆ ಪ್ರದೇಶ ಹಾವಿನ ಮೊಟ್ಟೆ- ಕಾಮಗಾರಿ ಮುಂದೂಡಿ ಹಾವಿನ ಮರಿಗಳಿಗೆ ಹೊಸ ಜೀವನ ಕಲ್ಪಿಸಿದ ವನ್ಯಜೀವಿ ಉತ್ಸಾಹಿಗಳು

ಮಂಜೇಶ್ವರ: ಕಾಸರಗೋಡು ಸೌರ ವಿದ್ಯುತ್ ಯೋಜನೆ ಪ್ರದೇಶದಲ್ಲಿ ಭಾರೀ ಗಾತ್ರದ ಹಾವುಗಳ ಮೊಟ್ಟೆಗಳಿಂದ ಮರಿಗಳನ್ನು ಹೊರಹಾಕಲು ಅಧಿಕಾರಿಗಳು ಮತ್ತು ವನ್ಯಜೀವಿ ಉತ್ಸಾಹಿಗಳ ಗುಂಪು ವಿಶೇಷ ಸಂರಕ್ಷಣೆಯನ್ನು ನೀಡಿದರು.

ಹಾವುಗಳ ಮರಿಗಳನ್ನು ಸಂರಕ್ಷಿಸಲು ಸೌರ ಉದ್ಯಾವನದ ನಿರ್ಮಾಣ ಕಾಮಗಾರಿಯನ್ನು ಹದಿನೈದು ದಿನಗಳ ತನಕ ಮುಂದೂಡಿ ಅಧಿಕಾರಿಗಳು ವನ್ಯ ಜೀವಿಯಲ್ಲಿರುವ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಅರಣ್ಯ ಇಲಾಖೆ, ಕಾಸರಗೋಡು ಶ್ರೇಣಿ ಅಧಿಕಾರಿ ಅನಿಲ್ ಕುಮಾರ್ ರವರ ಮುತುವರ್ಜಿಯಿಂದ ಹಾವುಗಳ ಮರಿಗಳಿಗೆ ಹೊಸ ಜೀವವನ್ನು ಕಲ್ಪಿಸಲಾಯಿತು.

ಕೋಟ್ಯಾಂತರ ರೂ ಗಳನ್ನೂ ವೆಚ್ಚಮಾಡಿರುವ ಕಾಸರಗೋಡು ಸೌರ ವಿದ್ಯುತ್ ಯೋಜನೆ ಪ್ರದೇಶದಲ್ಲಿ ಭಾರಿ ಗಾತ್ರದ ಹಾವುಗಳ ಮೊಟ್ಟೆಗಳಿಂದ ಮರಿಗಳನ್ನು ಹೊರಬಾರಿಸುವ ಉದ್ದೇಶದಿಂದ ಪ್ರತ್ಯೇಕ ಸಂರಕ್ಷಣೆಯನ್ನು ನೀಡಿರುವ ಅಧಿಕಾರಿಗಳ ಹಾಗೂ ಒಂದು ವಿಭಾಗ ವನ್ಯಜೀವಿ ಉತ್ಸಾಹಿಗಳ ಈ ಸೇವೆಗೆ ಸಾರ್ವಜನಿಕ ವಲಯದಿಂದ ಭಾರೀ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ಪೈವಳಿಕೆ ಕೊಮ್ಮಳಂಗದ ಸೌರ ವಿದ್ಯುತ್ ಯೋಜನೆ ಪ್ರದೇಶದಲ್ಲಿ ಮನುಷ್ಯತ್ವ ಕಾರುಣ್ಯದೊಂದಿಗೆ ಭಾರಿ ಗಾತ್ರದ ಹಾವುಗಳ ಮೊಟ್ಟೆಗಳು ಮರಿ ಇಡಲು ತಯಾರಾಗಿರುವುದು . 50 ಮೆಗಾವ್ಯಾಟ್ ಸೌರ ಯೋಜನೆಯ ಕಾಮಗಾರಿ ನಡೆಯುತ್ತಿರುವ ವೇಳೆ ಇದರೊಳಗೆ ಭಾರಿ ಗಾತ್ರದ ಹಾವುಗಳು ಮೊಟ್ಟೆ ಇಟ್ಟು ಮರಿ ಮಾಡಲು ಸಜ್ಜಾಗುತ್ತಿರುವ ದೃಶ್ಯ ಕಂಡು ಬಂದದ್ದು . ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮುತುವರ್ಜಿಯಲ್ಲಿ 272 ಕೋಟಿ ರೂಪಾಯಿಯ ಯೋಜನೆಯನ್ನು ಹದಿನೈದು ದಿನಕಾಲ ಮುಂದೂಡಲಾಗಿದೆ . ಮೊಟ್ಟೆಗಳಿಂದ ಹೊರಬರುತ್ತಿರುವ ಹಾವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

Related posts

Leave a Reply

Your email address will not be published. Required fields are marked *