Header Ads
Header Ads
Breaking News

ಕಾಸರಗೋಡು- ಮಂಗಳೂರು ಪ್ರಯಾಣಕ್ಕೆ ಬೇಕು ಬರೋಬರಿ ಮೂರುವರೆ ಗಂಟೆ

ತಂತ್ರಜ್ಞಾನ, ಸೌಕರ್ಯಗಳಲ್ಲಿ ಜಗತ್ತು ಮುಂಚೂಣಿಯ ನಾಗಾಲೋಟದಲ್ಲಿದ್ದರೆ ಗಡಿನಾಡು ಕಾಸರಗೋಡು ಎರಡು ದಶಕಗಳಷ್ಟು ಹಿಂದಕ್ಕೆ ಚಲಿಸತೊಡಗಿದ್ದು, ಜನಸಾಮಾನ್ಯರ ಸ್ಥಿತಿ ಆತಂಕಕಾರಿಯಾಗಿದೆ. ಇದೀಗ ಕಾಸರಗೋಡಿನಿಂದ ಮಂಗಳೂರಿಗೆ ಬರೋಬರಿ ಮೂರುವರೆ ಗಂಟೆಗಳ ಸುದೀರ್ಘ ಅವಧಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತಗಲುತ್ತಿದೆ. ಕೇರಳ- ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಿಂದ ಆರಂಭಿಸಿ ಕಾಸರಗೋಡಿನ ತನಕ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಹೊಂಡ ಗುಂಡಿ ನಿರ್ಮಾಣವಾಗಿದ್ದು, ಇನ್ನು ಕೆಲವೆಡೆ ಗದ್ದೆಯಂತಾಗಿದೆ. ಹೊಂಡಗುಂಡಿ ಸೃಷ್ಟಿಯಾಗಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಪದೇ ಪದೇ ಅಡ್ಡಿ ಆತಂಕ ಎದುರಾಗುತ್ತಿದ್ದು, ವಾಹನ ಚಾಲಕರಿಗೆ ಈ ರಸ್ತೆ ಸವಾಲಾಗಿ ಪರಿಣಮಿಸಿದೆ.

Related posts

Leave a Reply

Your email address will not be published. Required fields are marked *