Header Ads
Breaking News

ಕೇರಳ ರಾಜ್ಯದಲ್ಲಿ ಮತ್ತೆ 5 ಮಂದಿಗೆ ಕೊರೊನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಕೇವಲ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 183 ಮಂದಿಗೆ ಕೊರೊನಾ ವೈರಸ್ ಸೋಂಕು ಬಾದಿಸಿದ್ದು, ಈ ಪೈಕಿ 179 ಮಂದಿ ಗುಣಮುಖರಾಗಿದ್ದಾರೆ. ಕೇರಳ ರಾಜ್ಯದಲ್ಲಿ ಮಂಗಳವಾರ ಮತ್ತೆ ಐದು ಮಂದಿಗೆ ಕೊರೊನಾ ವೈರಸ್ ಸೋಂಕು ಬಾದಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 32 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ 32 ಮಂದಿ ಪೈಕಿ 23 ಮಂದಿಗೆ ಕೇರಳದ ಹೊರಗಿನಿಂದ ರೋಗ ಬಾಧಿಸಿದೆ. ಚೆನ್ನೆಯಿಂದ 6 ಮಂದಿಗೆ, ಮಹಾರಾಷ್ಟ್ರದಿಂದ 4, ನಿಜಾಮುದ್ದೀನ್‍ನಿಂದ 2, ವಿದೇಶದಿಂದ 11 ಮಂದಿಗೆ ರೋಗ ಬಾಧಿಸಿದೆ. ಸಂಪರ್ಕದಿಂದ 9 ಮಂದಿಗೆ ರೋಗ ಬಾಧಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *