Header Ads
Breaking News

ಕೊರೊನಾ ವೈರಸ್ ಬಗ್ಗೆ ಮಂಜೇಶ್ವರದಲ್ಲಿ ಜಾಗೃತಿ; ಕೊರೊನಾ ತಪಾಸಣಾ ಶಿಬಿರಕ್ಕೆ ಬ್ರೇಕ್ ದಿ ಚೈನ್ ವ್ಯವಸ್ಥೆ

ಮಂಜೇಶ್ವರ: ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ನಡೆಸುತ್ತಿರುವ ತಪಾಸಣಾ ಕೇಂದ್ರಕ್ಕೆ ಮಂಜೇಶ್ವರ ಸಹಕಾರಿ ಬ್ಯಾಂಕ್ ವತಿಯಿಂದ ಶಾಮಿಯಾನ ಹಾಗೂ ಬ್ರೇಕ್ ದಿ ಚೈನ್ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ತಪಾಸಣೆ ನಡೆಸುತ್ತಿರುವವರ ಆವಶ್ಯಕ್ಕೆ ಇರುವ ನೀರು, ಕೈತೊಳೆಯಲು ಸ್ಯಾನಿಟೈಸರ್ ಸೇರಿದಂತೆ ಇತರ ಸೌಕರ್ಯಗಳನ್ನು ಬ್ಯಾಂಕ್ ವತಿಯಿಂದ ಕಲ್ಪಿಸಲಾಯಿತು. ಮಂಜೇಶ್ವರ ಠಾಣಾ ಎ ಎಸ್ಸೈ ರಾಜೀವ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಆಸ್ಪತ್ರೆಯ ವೈದ್ಯ ಶ್ರೀ ಹರಿ ಸ್ಯಾನಿಟೈಸರನ್ನು ಹಂಚುವ ಮೂಲಕ ಉದ್ಘಾಟಿಸಿದರು.

ಬ್ಯಾಂಕ್ ಅಧ್ಯಕ್ಷ ಬಿ ವಿ ರಾಜನ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ಬ್ಯಾಂಕ್ ಕಾರ್ಯದರ್ಶಿ ರಾಜನ್ ಪಿ ನಾಯರ್, ದಯಾಕರ ಮಾಡ, ಕಮಲಾಕ್ಷ ಕನಿಲ, ಶ್ರೀಧರ್, ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *