Breaking News

ಕಿನ್ನಿಗೋಳಿಯಲ್ಲಿ ಅಗ್ನಿ ದುರಂತ, ಸ್ಟುಡಿಯೋ ಸಂಪೂರ್ಣ ಬೆಂಕಿಗಾಹುತಿ

ಅಗ್ನಿ ಅವಘಡದಿಂದಾಗಿ ಕಿನ್ನಿಗೋಳಿ ಜಂಕ್ಷನ್‌ನಲ್ಲಿದ್ದ ಸ್ಟುಡಿಯೋವೊಂದು ಸಂಪೂರ್ಣ ಬೆಂಕಿಗಾಹುತಿ ಆಗಿರೋ ಘಟನೆ ಕಳೆದ ತಡರಾತ್ರಿ ನಡೆದಿದೆ.
ಸರಿಸುಮಾರು ಹತ್ತು ಗಂಟೆ ವೇಳೆಗೆ ಪ್ರತಿಮಾ ಹೆಸರಿನ ಸ್ಟುಡಿಯೋವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆಯೇ ಬೆಂಕಿಯ ಜ್ವಾಲೆ ಮೊದಲ ಮಹಡಿಗೂ ಪ್ರವಹಿಸಿ ಸ್ಟುಡಿಯೋದಲ್ಲಿದ್ದ ಇಲೆಕ್ಟ್ರಾನಿಕ್ಸ್ ಹಾಗೂ ಇನ್ನಿತರ ಪರಿಕರಗಳು ಸಂಪೂರ್ಣ ಸುಟ್ಟುಕರಕಲಾಗಿದೆ. ಸ್ಟುಡಿಯೋ ಸಮೀಪವಿರುವ ಬೇಕರಿಯೊಂದಕ್ಕೂ ತಕ್ಕಮಟ್ಟಿನ ಬೆಂಕಿ ತಗುಲಿದ್ದು, ಭಾಗಶಃ ಹಾನಿಯಾಗಿದೆ. ಇದೇ ವೇಳೆ ಕಟ್ಟಡದಲ್ಲಿದ್ದ ಗ್ಯಾಸ್ ಸಿಲಿಂಡರ್ ವೊಂದು ಸ್ಪೋಟಗೊಂಡಿದ್ದು ಬೆಂಕಿ ಹರಡಲು ಇನ್ನಷ್ಟು ಕಾರಣವಾಯಿತು.
ಬೆಂಕಿ ನಂದಿಸಲು ಸುಮಾರು ಒಂದು ಗಂಟೆಗಳ ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಬೆಂಕಿ ನಂದಿಸುವ ವೇಳೆ ಮೊದಲ ಮಹಡಿ ಕುಸಿದ ಪರಿಣಾಮ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಹಿತ ಐದು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಮೂಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply