Header Ads
Breaking News

ಕುಂಜತ್ತೂರಿನ ಸಾಹಿತ್ಯ ಕೂಟಕ್ಕೆ ನಾಲ್ಕನೇ ವರ್ಷದ ಸಂಭ್ರಮ

ಕಳೆದ ಮೂರು ವರ್ಷಕ್ಕೆ ಮೊದಲು ತೂಮಿನಾಡು ಸಾಹಿತ್ಯ ಪ್ರೇಮಿಗಳಿಂದ ಉತ್ಸಾಹದಿಂದ ಚಿಗುರೊಡೆದ ಕುಂಜತ್ತೂರು ಸಾಹಿತ್ಯ ಕೂಟ ಇದೀಗ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ತೂಮಿನಾಡು ಮಹಾ ಕಾಳಿ ರಸ್ತೆಯಲ್ಲಿರುವ ಸುಪರ್ಣದಲ್ಲಿ ಬಿ ನಾರಾಯಣ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವೈದ್ಯರಾದ ಡಾ. ಕೆ ಎ ಖಾದರ್ ಉದ್ಘಾಟಿಸಿದರು. ಸೋಮನಾಥ ಬಿ ವರದಿ ವಾಚಿಸಿದರು. ಬಳಿಕ ಹೊಸ ವರ್ಷದ ಆಡಳಿತ ಮಂಡಳಿಯನ್ನು ರಚಿಸಲಾಯಿತು.

ಮುಖ್ಯ ಅತಿಥಿಯಾಗಿ ಆನಂದ ಮಾಸ್ಟರ್ ಭಾಗವಹಿಸಿದ್ದರು. ಈ ಸಂದರ್ಭ ಮಂಜೇಶ್ವರ ಗ್ರಾಹಕರ ವೇದಿಕೆಯ ಅಧ್ಯಕ್ಷ ಮುರಳೀದಹರ ಭಟ್ ಕೂಡಾ ಮುಖ್ಯ ಅತಿಥಿಯಾಗಿ ಉಪಸ್ಥರಿದ್ದರು. ವೇದಿಕೆಯಲ್ಲಿ ಸಾಹಿತ್ಯವೇದಿಕೆಯ ಸ್ಥಾಪಕಾಧ್ಯಕ್ಷ ನಿವೃತ ತಹಶೀಲ್ದಾರ ಕೆ ಪಿ ಸೋಮಶೇಖರ, ಕ್ರಷ್ಣಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥರಿದ್ದರು.

Related posts

Leave a Reply

Your email address will not be published. Required fields are marked *