Header Ads
Breaking News

ಕುಂಜತ್ತೂರು ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಮಂಜೇಶ್ವರ: ಗಡಿನಾಡ ಪ್ರದೇಶವಾದ ಕುಂಜತ್ತೂರು ಹೈಯರ್ ವೊಕೇಶನಲ್ ಸೆಕಂಡರಿ ಶಾಲೆಯಲ್ಲಿ 2019- 2020ನೇ ಸಾಲಿನ ಶಾಲಾ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ ದೊರಕಿತು. ಎರಡು ದಿನಗಳಲ್ಲಾಗಿ ನಡೆಯಲಿರುವ ವಿದ್ಯಾರ್ಥಿ ವಿದ್ಯಾರ್ಥಿನಿಗಳ ಕ್ರೀಡಾ ಕೂಟದಲ್ಲಿ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.ಎಸ್‍ಪಿಸಿ ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕವಾದ ಪಥ ಸಂಚಲನ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾಸ್ಟರ್ ಧ್ವಜಾರೋಹಣ ಗೈದರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕ್ರೀಡಾ ಕೂಟವನ್ನು ಉದ್ಘಾಟಿಸಿದರು. ಅಧ್ಯಾಪಕರುಗಳಾದ ಅನಿತಾ ಜಿ, ಪ್ರಮೀಳಾ ಕುಮಾರಿ, ಶಿಶುಪಾಲನ್, ಅಶ್ರಫ್ ಮೊದಲಾದವರು ಕ್ರೀಡಾ ಕೂಟಕ್ಕೆ ನೇತೃತ್ವ ನೀಡಿದರು.

Related posts

Leave a Reply

Your email address will not be published. Required fields are marked *