Header Ads
Header Ads
Breaking News

ಕುಂಜತ್ತೂರು ಶಾಲೆಯಲ್ಲಿ ವಿದ್ಯಾರ್ಥಿಗಳ ಕಲೋತ್ಸವಕ್ಕೆ ಅದ್ದೂರಿಯ ಚಾಲನೆ

ಮಂಜೇಶ್ವರ : ಕೇರಳ ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಜಿ.ವಿ.ಎಚ್. ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ವಿದ್ಯಾರ್ಥಿಗಳ ಕಲೋತ್ಸವಕ್ಕೆ ಅದ್ದೂರಿಯ ಚಾಲನೆ ದೊರಕಿತು. ಇನ್ನೆರಡು ದಿನಗಳೊಳಗಾಗಿ ಕಲೋತ್ಸವ ನಡೆಯಲಿದ್ದು, ವಿದ್ಯಾರ್ಥಿಗಳು ವಿವಿಧ ರೀತಿಯ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ. ಇಲ್ಲಿಂದ ಆಯ್ಕೆಯಾದ ವಿದ್ಯಾರ್ಥಿಗಳು ಉಪಜಿಲ್ಲಾ ಮಟ್ಟದಲ್ಲೂ , ಜಿಲ್ಲಾ ಮಟ್ಟದಲ್ಲೂ ಬಳಿಕ ರಾಜ್ಯ ಮಟ್ಟದಲ್ಲೂ ಮಿಂಚಲಿದ್ದಾರೆ. ಕಲೋತ್ಸವದ ಉದ್ಘಾಟನೆಯನ್ನು ಶಾಲಾ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶಿ ಬಾಲಕೃಷ್ಣ. ಜಿ. ವಹಿಸಿದ್ದರು. ಈ ಸಂದರ್ಭ ಪಿಟಿಎ ಉಪಾಧ್ಯಕ್ಷರಾದ ಬಾಪಾಂಕುಂಞಿ, ಸದಸ್ಯ ಈಶ್ವರ್ ಮಾಸ್ತರ್, ಶಿಕ್ಷಕ ಕಿಶೋರ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *