Breaking News

ಕುಂದಾಪುರದಲ್ಲಿ ಹಾವು ಕಚ್ಚಿ ಮಹಿಳೆ ಸಾವು,  ವೈದ್ಯರ ನಿರ್ಲಕ್ಷ್ಯಕ್ಕೆ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ


ಕುಂದಾಪುರ ಸರ್ಕಾರಿ ಆಸ್ಪತ್ರೆ ಇನ್ನೊಂದು ಅಪವಾದ ಹೊತ್ತಿದೆ. ಹಾವು ಕಚ್ಚಿ ದಾಖಲಾದ ಮಹಿಳೆಗೆ ಚಿಕಿತ್ಸೆ ನೀಡದೇ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಡ್ಯೂಟಿ ಡಾಕ್ಟರ್ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಹಾವು ಕಚ್ಚಿದ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದ್ದು; ಅನಂತರ ಕಾರ್ಮಿಕ ವೇದಿಕೆ ಮತ್ತು ಇತರ ಸಂಘಟನೆ ಸದಸ್ಯರು ಆಸ್ಪತ್ರೆಗೆ ಬಂದು ಪ್ರತಿಭಟನೆ ನಡೆಸಿದ್ದು ಈ ಸಂದರ್ಭ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಬೈಂದೂರು ಸಮೀಪದ ಯೋಜನಾ ನಗರದ ವಿಶಾಲಾಕ್ಷಿ ೩೭ರ ಪೂಜಾರಿಗೆ ಅಡುಗೆ ಮನೆಯಲ್ಲಿ ಆಕೆಯ ಬಲಗೈಗೆ ವಿಷಪೂರಿತ ಹಾವು ಕಡಿದಿದೆ. ತಕ್ಷಣ ಕೈಗೆ ಬಟ್ಟೆ ಕಟ್ಟಿ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಇಲ್ಲಿ ಹಾವು ಕಚ್ಚಿದ್ದಕ್ಕೆ ಸೂಕ್ತ ಚುಚ್ಚುಮದ್ದು ಇಲ್ಲ, ಕುಂದಾಪುರಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಕೂಡಲೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಯಿತು. ಕೂಡಲೇ ಚಿಕಿತ್ಸೆ ನೀಡಿ ಎಂದು ವಿಶಾಲಾಕ್ಷಿ ಮನೆಯವರು ವೈದ್ಯರನ್ನು ಕೇಳಿಕೊಂಡರಂತೆ. ಆಗ ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ, ಏನೂ ತೊಂದರೆ ಇಲ್ಲ ಎಂದು ಹೇಳಿದರು. ಬೆಸತ್ತ ಆ ಮಹಿಳೆ ಕುಟುಂಬಸ್ಥರು ಬೇರೆ ವಾಹನದ ಮೂಲಕ ಜಡ್ಕಲ್‌ನ ಒಂದು ಆರ್ಯುವೇದಿಕ್ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರಿಲ್ಲದ ಕಾರಣ ಅಲ್ಲಿಂದ ವಾಪಾಸು ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಈ ಸಂದರ್ಭ ಪರೀಕ್ಷಿಸಿದ ವೈದ್ಯರು ಉಸಿರಾಟದ ತೊಂದರೆ ಇದೆ. ನಮ್ಮಲ್ಲಿ ಐಸಿಯು ವ್ಯವಸ್ಥೆ ಇಲ್ಲ. ಆದ್ದರಿಂದ ಈ ಬಗ್ಗೆ ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಆದರೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಹಿಳೆ ಸಾವನ್ನಪ್ಪಿದ್ದಾರೆ.
ಘಟನೆಯಿಂದ ಮನೆಯವರು ಬಹಳಷ್ಟು ಕುಗ್ಗಿ ಹೋಗಿದ್ದು, ಮಧ್ಯಾಹ್ನ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದ ತಕ್ಷಣ ವೈದ್ಯರು ಸ್ಪಂದಿಸಿದ್ದರೆ ಅವರು ಬದುಕುಳಿಯುತ್ತಿದ್ದರು. ಆದರೆ ಸುಮಾರು ಒಂದು ಗಂಟೆಗಳ ಕಾಲ ನಮ್ಮನ್ನು ಕಾಯಿಸಿದ್ದಾರೆ, ಈಗ ಹೋದ ಜೀವ ವಾಪಾಸು ಬರುತ್ತದೆಯೇ? ಘಟನೆ ನಡೆದ ಕುರಿತು ಮಾಹಿತಿ ದೊರೆತ ರವಿಶೆಟ್ಟಿ ನೇತೃತ್ವದ ಕಾರ್ಮಿಕ ಸಂಘಟನೆಯವರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲಕ್ಕೆ ತೆಗೆದುಕೊಂಡು ಹೋಗುವಂತೆ ಸೂಚಿಸಲಾಗಿತ್ತು. ಆದರೆ ಕಾರ್ಮಿಕ ಸಂಘಟನೆಯವರು ಮೃತ ದೇಹವನ್ನು ಅಲ್ಲಿ ಸಾಗಿಸಬೇಕಾದರೆ ಮೊದಲು ಈ ಕುಟುಂಬಕ್ಕೆ ನ್ಯಾಯ ನೀಡಬೇಕು ಮತ್ತು ನಿರ್ಲಕ್ಷ್ಯ ತೋರಿದ ವೈದ್ಯರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಪರಿಸ್ಥಿತಿ ವಿಕೋಪಕ್ಕೆ ತೆರಳಿರುವುದನ್ನು ಕಂಡು ಜಿಲ್ಲಾಧಿಕಾರಿಗಳು ಕುಂದಾಪುರ ಪಿಎಸ್‌ಐ ನಾಸೀರ್ ಹುಸೇನ್‌ಗೆ ಎಲ್ಲರ ಸಮ್ಮುಖದಲ್ಲಿ ಸಿಸಿಟಿವಿಯನ್ನು ಪ್ರದರ್ಶಿಸುವಂತೆ ಸೂಚಿಸಿದರು. ಎಸಿಯವರಿಗೆ ಸ್ಥಳಕ್ಕೆ ತೆರಳಿ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಅವರು ನೀಡಿದ ವರದಿಯನ್ನು ಆರೋಗ್ಯ ಇಲಾಖೆ ಕಮಿಷನರ್‌ಗೆ ಸಲ್ಲಿಸಲಾಗುತ್ತದೆ. ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿನ ಆರೋಪಗಳ ಕುರಿತು ತನಿಖೆ ನಡೆಸಲು ವಿಶೇಷ ಕಮಿಟಿಯನ್ನು ರಚಿಸಲಾಗುತ್ತದೆ. ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ.

Related posts

Leave a Reply