Header Ads
Breaking News

ಕುಂದಾಪುರ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಿನ್ನಮತ ಸ್ಫೋಟ!

ಕುಂದಾಪುರದ ಇಲ್ಲಿನ ಆರ್.ಎನ್ ಶೆಟ್ಟಿ ಮಿನಿ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಗಫೂರ್ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರೆ ಅಡ್ಡಿಮಾಡಿದ ಘಟನೆ ನಡೆದಿದೆ. ಕಾರ್ಯಕರ್ತರ ಸಮಾವೇಶದಲ್ಲಿ ಗಫೂರ್ ಭಾಷಣ ಆರಂಭಿಸುತ್ತಿದ್ದಂತೆ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆಗಮಿಸಿದ್ದು, ನೆರೆದಿದ್ದ ಕಾರ್ಯಕರ್ತರಿಗೆ ಹಸ್ತಲಾಘವ ನೀಡಿ ಕುಶಲೋಪಹರಿ ವಿಚಾರಿಸುತ್ತಿದ್ದರು. ಈ ವೇಳೆಯಲ್ಲಿ ಭಾಷಣ ನಿಲ್ಲಿಸಿದ ಗಫೂರ್ ಪ್ರಮೋದ್ ಮಧ್ವರಾಜ್ ಅವರನ್ನು ಬರಮಾಡಿಕೊಂಡರು. ಮತ್ತೆ ಗಫೂರ್ ಭಾಷಣ ಆರಂಭಿಸುತ್ತಿದ್ದಂತೆ ಸಭಿಕರ ಸಾಲಿನಲ್ಲಿ ಕೂತ ಕಾಂಗ್ರೆಸ್ ಕಾರ್ಯಕರ್ತ ಚೋರಾಡಿ ಅಶೋಕ್ ಶೆಟ್ಟಿ ಎದ್ದುನಿಂತು ಗಫೂರ್ ಕೈಯ್ಯಲ್ಲಿರುವ ಮೈಕ್ ಪಡೆದು ಮಾತನಾಡಲು ಆರಂಭಿಸಿದರು. ಪ್ರಾಮಾಣಿಕ ರಾಜಕಾರಣಿ ಪ್ರತಾಪಚಂದ್ರ ಶೆಟ್ಟಿಯವರ ಬಗ್ಗೆ ಉಡುಪಿಯಲ್ಲಿ ನಡೆದ ಸಭೆಯಲ್ಲಿ ನೀವು ಹಗುರವಾಗಿ ಮಾತನಾಡಿದ್ದೀರಿ. ಕುಂದಾಪುರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಪ್ರತಾಪಚಂದ್ರ ಶೆಟ್ಟರ ಕ್ಷೇತ್ರದಲ್ಲಿ ನಿಮಗೆ ನಾವು ಭಾಷಣ ಮಾಡಲು ಬಿಡೋದಿಲ್ಲ. ನಮ್ಮ ಪಕ್ಷನಿಷ್ಠೆಯನ್ನು ಪರೀಕ್ಷೆ ಮಾಡಲು ಬರಬೇಡಿ. ಇನ್ನುಮುಂದೆ ಈ ರೀತಿಯಾಗಿ ವರ್ತಿಸಿದರೆ ನಿಮಗೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು

Related posts

Leave a Reply

Your email address will not be published. Required fields are marked *