Header Ads
Header Ads
Header Ads
Breaking News

ಕುಂದಾಪುರ ಪರಿವರ್ತನಾ ಸಮಾವೇಶದಲ್ಲಿ ಹೈಡ್ರಾಮಾ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧ ಕೆಲ ಕಾರ್ಯಕರ್ತರಿಂದ ಬಹಿರಂಗ ಆಕ್ರೋಶ

ಬಿಜೆಪಿ ನವಕರ್ನಾಟಕ ಪರಿವರ್ತನಾ ರ್‍ಯಾಲಿ ಇಂದು ಕುಂದಾಪುರಕ್ಕೆ ಆಗಮಿಸಿತು. ಕುಂದಾಪುರದಲ್ಲಿ ನಡೆದ ಸಮಾವೇಶದಲ್ಲಿ ಹೈಡ್ರಾಮಾ ಉಂಟಾಗಿದೆ. ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತವಾಯಿತು.

ಶ್ರೀನಿವಾಸ್ ಶೆಟ್ಟಿಯವರು ಇಂದು ಕುಂದಾಪುರದಲ್ಲಿ ನಡೆದ ಪರಿವರ್ತನಾ ಸಾಮಾವೇಶದಲ್ಲಿ ಬಿಜೆಪಿ ಸೇರ್ಪಡೆಗೆ ಕೆಲ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಲಾಡಿ ಬಣ ಮತ್ತು ಮೂಲ ಬಿಜೆಪಿ ಬಣದ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆಯಲ್ಲಿ ಯಡ್ಯೂರಪ್ಪ ಮಧ್ಯ ಪ್ರವೇಶಿಸಿ ಹಾಲಾಡಿ ವಿರೋಧಿಗಳ ವಿರುದ್ಧ ಕಿಡಿಕಾರಿದರು. ಹಾಲಾಡಿಯೇ ನಮ್ಮ ನಾಯಕರು, ಮುಂದಿನ ಶಾಸಕ, ಒಪ್ಪದವರು ಪಕ್ಷ ಬಿಟ್ಟು ಹೋಗಿ ಎಂದು ವೇದಿಕೆಯಲ್ಲೇ ಹರಿಹಾಯ್ದರು. ಅದಾಗಲೇ ಸಮಾವೇಶದಲ್ಲಿ ಗೊಂದಲ ಉಂಟಾಯಿತು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ತಣ್ಣಗಾಗಿಸಿದರು.

Related posts

Leave a Reply