Header Ads
Breaking News

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವ ಸಂಪನ್ನ

ಭಾರತದ ಪ್ರಮುಖ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಮಹೋತ್ಸವ ಸಂಪನ್ನಗೊಂಡಿತು. ಕೋಟ್ಯಂತರ ಭಕ್ತರ ಆರಾಧ್ಯ ಮೂರ್ತಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮುಂಜಾನೆಯ 7.25ರ ಧನುರ್ಲಗ್ನ ಸುಮುಹೂರ್ತದಲ್ಲಿ ಬ್ರಹ್ಮರಥರೂಢನಾಗಿ ಭಕ್ತರಿಗೆ ದರ್ಶನ ನೀಡಿದ್ದಾನೆ. ದೇವಳದ ರಾಜಮಾರ್ಗದಲ್ಲಿ ಯಶಸ್ವಿನಿ ಆನೆಯೊಂದಿಗೆ ಸಂಭ್ರಮದ ಬ್ರಹ್ಮರಥೋತ್ಸವ ಜರುಗಿತು. ಕೋವಿಡ್ ಕಾರಣದಿಂದಾಗಿ ಪರ ಊರಿನ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದ್ದರೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬ್ರಹ್ಮ ರಥೋತ್ಸವ ಕಣ್ತುಂಬಿಕೊಂಡರು. ಚಂಪಾಷಷ್ಠಿ ವಾರ್ಷಿಕ ಜಾತ್ರೆ ಪ್ರಯುಕ್ತ ಮಾರ್ಗಶಿರಾ ಶುದ್ಧ ಪಂಚಮಿಯ ದಿನದಂದು ಪಲ್ಲಕ್ಕಿ ಪೂಜೆ, ರಾತ್ರಿ ತೈಲಾಭ್ಯಂಜನ ಮತ್ತು ಮಧ್ಯರಾತ್ರಿ ಪಂಚಮಿ ರಥೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಆಕರ್ಷಕ ಬೆಡಿ ಉತ್ಸವವೂ ಜರುತ್ತದೆ. ಬೆಳಿಗ್ಗೆ ಬ್ರಹ್ಮರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಭಕ್ತಜನಸಾಗರ ಈ ಮಹಾ ಸಂಭ್ರಮವನ್ನು ಕಣ್ತುಂಬಿಕೊಂಡಿತು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಎಡೆಸ್ನಾನ ರದ್ದುಪಡಿಸಲಾಗಿತ್ತು. ಆದರೆ, ಕೆಲವೇ ಕೆಲವು ಮಂದಿ ಬೀದಿ ಮಡೆಸ್ನಾನ ಮಾಡುವ ದೃಶ್ಯ ಕಂಡು ಬಂತು. ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆ ವೇಳೆ ಸಂತೆ ವ್ಯಾಪಾರ, ಅಂಗಡಿಗಳನ್ನು ನಿರ್ಬಂಧಿಸಲಾಗಿತ್ತು. ಗರಿಷ್ಠ ಪ್ರಮಾಣದಲ್ಲಿ ಕೋವಿಡ್-19 ನಿಯಮ ಪಾಲಿಸಲು ಕ್ರಮ ಕೈಗೊಳ್ಳಲಾಗಿತ್ತು.

Related posts

Leave a Reply

Your email address will not be published. Required fields are marked *