
ಕುಕ್ಕೆ ಸುಬ್ರಹ್ಮಣ್ಯ ದ ಕಾಶಿಕಟ್ಟೆ ಬಳಿ 1.11 ಕೋಟಿ ವೆಚ್ಚದ ಹೋರರೋಗಿ ವಿಭಾಗದ ಚಿಕಿತ್ಸಾ ಘಟಕ (OPD) ಸ್ಥಾಪನೆಯಾಗಲಿದ್ದು ಶಾಸಕರಾದ ಎಸ್ ಅಂಗಾರ ಜ.7 (ಇಂದು) ಶಂಕುಸ್ಥಾಪನೆ ರಂದು ನೆರವೇರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಾಣವಾಗಲಿರುವ ಈ ಕಟ್ಟಡದಲ್ಲಿ 4 ಹಾಸಿಗೆಗಳ ಹೋರ ರೋಗಿ ಕಟ್ಟಡವಾಗಿದ್ದು ಪ್ರಯೋಗಾಲಯ, ನಿರೀಕ್ಷಣಾ ಕೊಠಡಿ, ವೈದ್ಯಾಧಿಕಾಗಳ ಕೊಠಡಿ, ಎಂಟ್ರೆನ್ಸ್ ಲಾಬಿ, ರಿಸೆಪ್ಷನ್ ಕೌಂಟರ್, ಡ್ರೆಸಿಂಗ್ ರೂಂ, ಗಂಡಸರ ಮತ್ತು ಹೆಂಗಸರ ಪ್ರತ್ಯೇಕ ಶೌಚಾಲಯ ಇರಲಿದೆ.ಶಂಕುಸ್ಥಾಪನೆ ಸಂದರ್ಭ ಅಭಿವದ್ಧಿ ಸಮಿತಿ ಸದಸ್ಯರಾದ ಪಿ ಜಿ ಎಸ್ ಎನ್ ಪ್ರಸಾದ್, ಮನೋಹರ ರೈ, ವನಜಾ ಭಟ್ , ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ, ತಾ ಪಂ ಸದಸ್ಯ ಅಶೋಕ್ ನೆಕ್ರಾಜೆ , ತಾಲ್ಲೂಕು ಆರೋಗ್ಯಾಧಿಕಾರಿ ಡಾ। ಸುಬ್ರಹ್ಮಣ್ಯ, ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಸ್ಥಳೀಯರಾದ ರವಿ ಕಕ್ಕೆಪದವು, ಎಚ್ ಎಲ್ ವೆಂಕಟೇಶ್, ಅಚ್ಚುತ ಗೌಡ, ದಿನೇಶ್ ಸಂಪ್ಯಾಡಿ, ಪ್ರಶಾಂತ್ ಭಟ್ ಮಾಣಿಲ, ಶ್ರೀಕುಮಾರ್ ಮತ್ತಿತರರು ಉಪಸ್ಥಿತರಿದ್ದರು .