Header Ads
Breaking News

ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥಕ್ಕೆ ಮಂಗಳೂರಿನ ಕದ್ರಿಯಿಂದ ಚಾಲನೆ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಉದ್ಯಮಿ ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಕೊಡುಗೆಯಾಗಿ ನೀಡಲಿರುವ ಬ್ರಹ್ಮರಥ ಸಾಗಾಟಕ್ಕೆ ಮಂಗಳವಾರ ಕದ್ರಿಯಿಂದ ಚಾಲನೆ ನೀಡಲಾಯಿತು. ಸೋಮವಾರ ಕೋಟೇಶ್ವರದಿಂದ ಹೊರಟಿದ್ದ ಬ್ರಹ್ಮರಥ ಹೊತ್ತ ಟ್ರಕ್ ರಾತ್ರಿ ಮಂಗಳೂರು ತಲುಪಿ ಕದ್ರಿಯಲ್ಲಿ ತಂಗಿತ್ತು. ಇಂದು ಬೆಳಿಗ್ಗೆ ಕದ್ರಿ ಕ್ಷೇತ್ರದಿಂದ ಕಡಬಕ್ಕೆ ಪ್ರಯಾಣ ಬೆಳೆಸಿತು.ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಕದ್ರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎ.ಜೆ.ಶೆಟ್ಟಿ, ಮಾಜಿ ಮೇಯರ್ ಭಾಸ್ಕರ ಮೊಯ್ಲಿ, ಸುಧೀರ್ ಶೆಟ್ಟಿ ಕಣ್ಣೂರು, ರಾಕೇಶ್ ಮಲ್ಲಿ, ಅಶೋಕ್ ಕುಮಾರ್ .ಡಿ.ಕೆ., ವಿಶ್ವಾಸ್ ಕುಮಾರ್ ದಾಸ್, ಪುಷ್ಪರಾಜ ಜೈನ್, ಕಳ್ಳಿಗೆ ತಾರಾನಾಥ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು

Related posts

Leave a Reply

Your email address will not be published. Required fields are marked *