Header Ads
Breaking News

ಜೂ.30 ರಂದು ಪುರಭವನದಲ್ಲಿ ಕುದ್ಮುಲ್ ರಂಗರಾಯರ 160ನೇ ಜನ್ಮ ದಿನಾಚರಣೆ ಕಾರ್ಯಕ್ರಮ

ಕುದ್ಮುಲ್ ಶ್ರೀ ರಂಗರಾವ್ ಸ್ಮಾರಕ ಸೇವಾ ಸಂಘದ ವತಿಯಿಂದ ಕುದ್ಮುಲ್ ರಂಗರಾಯರ 160ನೇ ಜನ್ಮ ದಿನಾಚರಣೆಯನ್ನು ಜೂನ್ 30ರಂದು ಮಂಗಳೂರಿನ ಪುರಭವನದಲ್ಲಿ ಆಚರಿಸಲಿದ್ದೇವೆ ಎಂದು ಅಧ್ಯಕ್ಷರಾದ ದೇವೇಂದ್ರ ಕಾಪಿಕಾಡ್ ತಿಳಿಸಿದರು.

ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಜೂನ್ 30ರಂದು ಸಂಜೆ 5 ಗಂಟೆಗೆ ಕುದ್ಮುಲ್ ಶ್ರೀ ರಂಗರಾವ್ ಸ್ಮಾರ ಭವನದಲ್ಲಿ ಆಚರಿಸುವುದೆಂದು ನಿರ್ಧರಿಸಿದ್ದೇವೆ. ಈ ಸುಸಂದರ್ಭದಲ್ಲಿ ದೀನ ದಲಿತರಿಗಾಗಿಯೇ ಅಲ್ಲಲ್ಲಿ ಶಾಲೆಗಳನ್ನು ತೆರೆದು ವಿದ್ಯಾದಾನ ಮಾಡಿದ, ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ, ದೀನ ದಲಿತರ ವಕಾಲತ್ತುಗಳನ್ನು ವಹಿಸಿ ನ್ಯಾಯಕ್ಕಾಗಿ ಹೋರಾಡಿದ ಕುದ್ಮುಲ್ ರಂಗರಾಯರ ಸ್ಮರಣಾರ್ಥ ಪ್ರತಿಮೆಯನ್ನು ಸ್ಥಾಪಿಸುವ ಈ ಪುಣ್ಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಬಿ. ತುಳಿಸಿದಾಸ್, ಉಮೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *