Breaking News

ಕುಸಿಯುವ ಭೀತಿಯಲ್ಲಿ ಅರಂತೋಡು-ತೊಡಿಕಾನ ರಸ್ತೆ

ಸುಳ್ಯ ತಾಲೂಕಿನ ಅರಂತೋಡು – ತೊಡಿಕಾನ ರಸ್ತೆ ಯ ತೊಡಿಕಾನ ಕಲ್ಲಂಬಳ ಎಂಬಲ್ಲಿ ರಸ್ತೆ ಬದಿಯ ಮೋರಿ ಬದಿ ಕುಸಿದು ರಸ್ತೆ ಸಂಪರ್ಕ ಕಡಿತಕೊಳ್ಳುವ ಭೀತಿ ಎದುರಾಗಿದೆ.ಈ ರಸ್ತೆ ತೊಡಿಕಾನ ಗ್ರಾಮ ಸಂಪರ್ಕದ ಮುಖ್ಯ ರಸ್ತೆಯಾಗಿದೆ. ಇದು ಇಲ್ಲಿಯ ಸುಮಾರು ೨೦೦ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಸುಮಾರು ಮೂರು ವರ್ಷಗಳ ಹಿಂದೆ ನಬಾರ್ಡ್ ಯೋಜನೆಯಡಿ ಅರಂತೋಡು – ತೊಡಿಕಾನ ರಸ್ತೆ ಮರುಡಾಮರೀಕರಣಗೊಂಡಿತ್ತು.ಈ ಸಂದರ್ಭದಲ್ಲಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರರು ಹಳೆಯ ಮೋರಿಯನ್ನು ಬದಲಾಯಿಸಿದೆ ಅದರ ಮೇಲೆ ಡಾಮರೀಕರಣ ಮಾಡಿದ ಪರಿಣಾಮ ಈಗ ಮೋರಿ ಕುಸಿತಗೊಂಡಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಾರೆ.

ಈ ರಸ್ತೆ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಸಂಪರ್ಕ ನೀಡುತ್ತದೆ. ದಿನ ನಿತ್ಯ ದೇವಾಲಯಕ್ಕೆ ನೂರಾರು ಭಕ್ತಾಧಿಗಳು ಬೇಟಿ ನೀಡುತ್ತಿದ್ದಾರೆ.ಅಲ್ಲದೆ ದೇವಳದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಿಗೆ ಸಾವಿರಾರು ಭಕ್ತಾರು ಬರುತ್ತಾರೆ. ತೊಡಿಕಾನಕ್ಕೆ ಸುಳ್ಯ ತಾಲೂಕು ಕೇಂದ್ರದಿಂದ ಪ್ರತಿ ಗಂಟೆಗೆ ಒಂದು ಬಾರಿ ಖಾಸಗಿ ಬಸ್ಸು ಸಂಚಾರ ಇದೆ.ಅಲ್ಲದೆ ತೊಡಿಕಾನದಿಂದ ಅನೇಕ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಕಳೆದ ವರ್ಷವೇ ಈ ರಸ್ತೆಯ ಮೋರಿ ಕುಸಿದ್ದ‌ಈ ರಸ್ತೆಯನ್ನು ತಕ್ಷಣ ದುರಸ್ತಿ ಕೈಗೆತ್ತಿಕೊಳ್ಳದಿದ್ದರೆ ರಸ್ತೆ ಸಂಪೂರ್ಣ ಕಡಿತಕೊಳ್ಳುವ ಸಾಧ್ಯತೆ ಹೆಚ್ಚಿದೆ.ಇದರಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಬೇಟಿ ನೀಡುವ ಭಕ್ತಾಧಿಗಳಿಗೆ ಹಾಗೂ ಪ್ರವಾಸಿ ಪ್ರೇಮಿಗಗಳು,ಊರವರು ಶಾಲಾ ಮಕ್ಕಳು ಸಮಸ್ಯೆಗೊಳಾಗುವ ಸಾಧ್ಯತೆ ಹೆಚ್ಚಿದೆ.ಈ ಎಲ್ಲಾ ಕಾರಣಗಳಿಂದ ಈ ರಸ್ತೆಯ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ ತೇಜೇಶ್ವರ್ ತೊಡಿಕಾನ

Related posts

Leave a Reply