Header Ads
Header Ads
Breaking News

ಕುಸ್ತಿಪಟು ಸುಂದರ ಕರ್ಕೆರರ ಪುಣ್ಯತಿಥಿ

ಗೋಕರ್ಣನಾಥ ದೇವಳದ ಸಭಾಂಗಣದಲ್ಲಿ ಕಾರ್ಯಕ್ರಮ
ನೂರಾರು ಗಣ್ಯರಿಂದ ಶ್ರದ್ಧಾಂಜಲಿ ಸಮರ್ಪಣೆ
ಇತ್ತೀಚೆಗೆ ಬೊಕ್ಕಪಟ್ಣ ಸ್ವಗ್ರಹದಲ್ಲಿ ನಿಧನರಾದ ಕುಸ್ತಿಪಟು ಪೈಲ್ವಾನ್ ಸುಂದರ ಕರ್ಕೆರ ಅವರ ಪುಣ್ಯತಿಥಿ ಕಾರ್ಯಕ್ರಮವು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.
ಕಳೆದ ಆರು ದಶಕಗಳ ಹಿಂದೆ ಅನೇಕ ಕುಸ್ತಿ ಟೂರ್ನಿಗಳಲ್ಲಿ ಭಾಗವಹಿಸಿ ಗೆದ್ದಿದ್ದ ಸುಂದರ ಕರ್ಕೆರರು ದಕ್ಷಿಣ ಕನ್ನಡ ಜಿಲ್ಲೆಗೆ ಹೆಗ್ಗಳಿಗೆ ತಂದಿರುವುದು ಮಾತ್ರವಲ್ಲದೆ ಅನೇಕರಿಗೆ ಕುಸ್ತಿಪಂದ್ಯಾಟವನ್ನು ಕಲಿಸಿದ ಕೀರ್ತಿ ಅವರದು. ಇಂದು ಗೋಕರ್ಣನಾಥ ದೇವಳದ ಸಭಾಂಗಣದಲ್ಲಿ ಸುಂದರ ಕರ್ಕೆರರಿಗೆ ಪುಣ್ಯತಿಥಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಸೇರಿದಂತೆ ಅನೇಕ ಮಂದಿ ಪುಣ್ಯತಿಥಿಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply