Header Ads
Breaking News

ಕೃಷಿ ಉತ್ಸವ ಮತ್ತು ಕರಾವಳಿ ಕಲೋತ್ಸವ-2021-ಫೆ.11ರಿಂದ ಫೆ.25ರವರೆಗೆ ನಡೆಯಲಿರುವ ಕಲೋತ್ಸವ

ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕದ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಇದರ ಆಶ್ರಯದಲ್ಲಿ ಕೃಷಿ ಉತ್ಸವ ಮತ್ತು ಕರಾವಳಿ ಕಲೋತ್ಸವ-2021 ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಮೈದಾನದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವೇದಿಕೆಯಲ್ಲಿ ಫೆ.11ರಿಂದ ಫೆ.25ರವರೆಗೆ ನಡೆಯಲಿದೆ ಎಂದು ಕೃಷಿ ಉತ್ಸವ – ಕರಾವಳಿ ಉತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಹೇಳಿದರು.

ಗೋಲ್ಡನ್ ಪಾರ್ಕ ಮೈದಾನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಫೆ.11ರಂದು ಗುರುವಾರ ಸಂಜೆ 4.30 ಕ್ಕೆ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಮೈದಾನದವರೆಗೆ ವಿವಿಧ ಕಲಾ ತಂಡಗಳ ಸೇರುವಿಕೆಯಲ್ಲಿ ಜಾನಪದ ದಿಬ್ಬಣದ ಮೆರವಣಿಗೆ ನಡೆಯಲಿದ್ದು, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ .ಆರ್. ಅವರು ಉದ್ಘಾಟಿಸಲಿರುವರು. ಸಂಜೆ 5.30ಕ್ಕೆ ಕೃಷಿ ಮೇಳ, ಕರಾವಳಿ ಕಲೋತ್ಸವದ ಉದ್ಘಾಟನೆಯನ್ನು ಮಾನ್ಯ ಮುಜರಾಯಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ನೆರವೇರಿಸಲಿರುವರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವೇದಿಕೆಯನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಸಚಿವ ಎಸ್. ಅಂಗಾರ ಅವರು ಉದ್ಘಾಟಿಸಲಿರುವರು. ಬಂಟ್ವಾಳ ಶಾಸಕ ರಾಜೇಶ್ ನಾÊಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಲಿರುವರು. ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರು ಅಮ್ಯೂಸ್‌ಮೆಂಟ್ ಪಾರ್ಕ್ ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಚಿಣ್ಣರ ಲೋಕದ ಸೇವಾ ಸಂಸ್ಥೆಯ ಐಸಿರಿ ಕನ್ನಡ ತುಳು ಆಲ್ಬಂ ಗೀತೆಯ ಬಿಡುಗಡೆ ನಡೆಯಲಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ.ಎಂ.ಮೋಹನ್ ಆಳ್ವ ಬಿಡುಗಡೆಗೊಳಿಸುವರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಲಿಮ್ಕಾ ದಾಖಲೆಯ ಮುಂಬೆÊ ಕಲಾ ಜಗತ್ತು ಇದರ ಸಂಚಾಲಕ, ಚಲನ ಚಿತ್ರ ನಟ, ನಿರ್ಮಾಪಕ ನಿರ್ದೇಶಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರಿಗೆ ಕರಾವಳಿ ಕಲಾಸೌರಭ ರಾಜ್ಯ ಪ್ರಶಸ್ತಿ ಮತ್ತು ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಕು.ದಿಯಾ ರಾವ್ ಕುಂಬ್ಳೆ ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 7 ಗಂಟೆಗೆ ಚಿಣ್ಣರ ಲೋಕ ಸೇವಾ ಟ್ರಸ್ಟ್ ಮಂಗಳೂರು,ಪಾAಡೇಶ್ವರ ಶ್ರೀ ಮುನೇಶ್ವರ ಮಹಾಗಣಪತಿ ದೇವಸ್ಥಾನ ಶಾಖೆಯ ವಿದ್ಯಾರ್ಥಿಗಳಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನವಿದೆ ಎಂದು ತಿಳಿಸಿದರು.

ಫೆ.12 ರಂದು ಶುಕ್ರವಾರ ಕೃಷಿ ಉತ್ಸವಕ್ಕೆ ಚಾಲನೆ ದೊರಕಲಿದ್ದು, ಬೆಳಗ್ಗೆ 10.30ಕ್ಕೆ ಕೃಷಿ ಸಿರಿ ಕಾರ್ಯಕ್ರಮವನ್ನು ಕುದನೆ ವಾಸುಕಿ ವನ ಧರ್ಮಚಾವಡಿಯ ಶ್ರೀ ವರದರಾಜ್ ಅವರು ಉದ್ಘಾಟಿಸುವರು. ಫೆ.13 ರಂದು ತಾಂತ್ರಿಕ ಸಿರಿ, ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಅವಿಷ್ಕಾರ ಮತ್ತು ಬಳಕೆ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಉದ್ಘಾಟಿಸಲಿರುವರು. ಸಂಜೆ 4.30 ಕ್ಕೆ ಕರಾವಳಿ ದಫ್ ಸ್ಪರ್ಧೆ ನಡೆಯಲಿದ್ದು, ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ಅವರು ಉದ್ಘಾಟಿಸಲಿರುವರು.


ಫೆ.14 ರವಿವಾರ ಮಧ್ಯಾಹ್ನ 2 ಗಂಟೆಗೆ ಕರಾವಳಿ ಸಗಮಪ ಸೀಸನ್-2 ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯ ಮೆಘಾ ಆಡಿಷನ್ ನಡೆಯಲಿದ್ದು, ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನದ ಪ್ರ. ಅರ್ಚಕ ಮಾದಕಟ್ಟೆ ಈಶ್ವರ ಭಟ್ ಉದ್ಘಾಟಿಸುವರು. ಫೆ.15 ರಂದು ಸೋಮವಾರ ಸಂಜೆ 4 ಗಂಟೆಗೆ ಕರಾವಳಿ ಡ್ಯಾನ್ಸ್ ಕರಾವಳಿ ರಾಜ್ಯ ಮಟ್ಟದ ಫಿಲ್ಮ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದ್ದು, ಉಷಾ ಸಮೂಹ ಸಂಸ್ಥೆಯ ವಿಶ್ವನಾಥ ಬಂಟ್ವಾಳ ಅವರು ಉದ್ಘಾಟಿಸುವರು. ಫೆ.16ರಂದು ಮಂಗಳವಾರ ಸಂಜೆ 5 ಗಂಟೆಗೆ ನಾಟಕೋತ್ಸವ ಉದ್ಘಾಟನೆ ನಡೆಯಲಿದ್ದು, ಉದ್ಯಮಿ ನಾಗೇಂದ್ರ ಬಾಳಿಗಾ ಉದ್ಘಾಟಿಸುವರು. ಫೆ.21 ರಂದು ರವಿವಾರ ಸಂಜೆ ಕರ್ನಾಟಕ ಸಿಂಗಾರಿ ಮೇಳ ಅಕಾಡೆಮಿ ಮಂಗಳೂರು ಇದರ ಆಶ್ರಯದಲ್ಲಿ ಚೆಂಡೆ ಕಲಾವಿದರ ಸಮಾವೇಶ, ಚೆಂಡೆ ವಿಚಾರ ಗೋಷ್ಠಿ, ಚೆಂಡೆ ಪ್ರದರ್ಶನ ನಡೆಯಲಿದೆ. ಫೆ.22 ಸೋಮವಾರ ಸಂಜೆ 4 ಕ್ಕೆ ರಂಗಭೂಮಿ ಕಲಾವಿದರ ಸಮಾವೇಶ ನಡೆಯಲಿದೆ. ಫೆ.23 ರಂದು ಮಂಗಳವಾರ ಸಂಜೆ 3 ಕ್ಕೆ ಕರಾವಳಿ ಸರಿಗಮಪ ಸೀಸನ್ 2 ಇದರ ಸೆಮಿ ಪೈನಲ್ ಮತ್ತು ಫೈನಲ್ ನಡೆಯಲಿದೆ. ಫೆ.25ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕೃಷಿ ಉತ್ಸವ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇAದ್ರ ಕುಮಾರ್ ಪ್ರಶಸ್ತಿ ವಿತರಿಸುವರು. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸ್ತಾಪಕ, ಪ್ರಧಾನ ಸಂಚಾಲಕ ಮೋಹನ್‌ದಾಸ್ ಕೊಟ್ಟಾರಿ, ಚಿಣ್ಣರ ಅಧ್ಯಕ್ಷೆ ಭಾಗ್ಯಶ್ರೀ ಬಿ.ಕೆ., ಗೌರವಾಧ್ಯಕ್ಷ ಜಯರಾಮ ರೈ ವಿಟ್ಲ, ಸ್ವಾಗತ ಸಮಿತಿ ಅಧ್ಯಕ್ಷ ಕಾಂತಾಡಿಗುತ್ತು ಸೀತರಾಮ ಶೆಟ್ಟಿ, ಉಪಾಧ್ಯಕ್ಷ ರಿಯಾಝ್ ಹುಸೇನ್, ಗೌರವ ಸಲಹೆಗಾರ ಸರಪಾಡಿ ಅಶೋಕ್ ಶೆಟ್ಟಿ, ಪ್ರಕಾಶ್ ಬಿ.ಶೆಟ್ಟಿ, ಎಚ್ಕೆ ನಯನಾಡು, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಮಹಮ್ಮದ್ ನಂದರಬೆಟ್ಟು, ಜಯಾನಮದ ಪೆರಾಜೆ, ರತ್ನದೇವ್ ಪುಂಜಾಲಕಟ್ಟೆ, ನಿರ್ದೇಶಕರಾದ ದೇವಪ್ಪ ಕುಲಾಲ್, ಮಹಮ್ಮದ್ ನಂದಾವರ, ಸೌಮ್ಯ ಭಂಡಾರಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *