Header Ads
Breaking News

ಕೃಷ್ಣನ ನಾಡಿನಲ್ಲಿ ಸಂಕ್ರಾತಿ ಉತ್ಸವ : ರಥಬೀದಿಯಲ್ಲಿ ಅಪೂರ್ವ ರಥೋತ್ಸವ

ಪೊಡವಿಗೊಡೆಯ  ಕೃಷ್ಣನ ನಾಡು ಉಡುಪಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ. ಸಾವಿರಾರು ದೀಪಗಳ ಮಧ್ಯೆ 3 ರಥೋತ್ಸವ. ಒಂದೆಡೆ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದರೆ ಇನ್ನೊಂದೆಡೆ ಈ ಬಾರಿಯ ಸಂಕ್ರಾಂತಿಯ ಉತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಸಾಕ್ಷೀಭೂತರಾದರು.

ಉಡುಪಿ ಅಂದ್ರೆ ದೇವಾಲಯಗಳ ನಗರಿ ಇಲ್ಲಿ ಪ್ರತಿದಿನವೂ ಉತ್ಸವ . ಧಾರ್ಮಿಕ ಸಾಂಸ್ಕೃತಿಕ ಕಲೆ ಸಂಗೀತ ನಾಟ್ಯ ಎಲ್ಲವಿಭಾಗಗಳಲ್ಲೂ ಉತ್ಸವವೇ.ಆದ್ರೆ ಕೃಷ್ಣ ಮಠದ ವಾರ್ಷಿಕ ಪರ್ವವಾಗಿ ಮಕರ ಸಂಕ್ರಾಂತಿಗೆ ವಿಶೇಷ ಸ್ಥಾನವಿದೆ. 800 ವರ್ಷಗಳ ಇತಿಹಾಸವಿರುವ ಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿಯ ದಿನ ವಿಶೇಷ ಉತ್ಸವ ನಡೆಯುತ್ತೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಏಕಕಾಲದಲ್ಲಿ 3 ರಥಗಳನ್ನು ಎಳೆಯಲಾಗುತ್ತೆ. ಈ ಬಾರಿಯಂತೂ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಉತ್ವಕ್ಕೆ ಮೊದಲು ಮಧ್ವ ಸರೋವರದಲ್ಲಿ ಆಕರ್ಷಕ ತೆಪ್ಪೋತ್ಸವ ನಡೆಯಿತು. ರಥದ ಆಕಾರದಲ್ಲಿ ಸಿದ್ಧಗೊಂಡ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಕೆರೆಗೆ ಸುತ್ತುಬರಲಾಯಿತು. ಬಳಿಕ 3 ರಥಗಳಲ್ಲಿ ಅನಂತೇಶ್ವರ ಚಂದ್ರಮೌಳೀಶ್ವರ ಮತ್ತು ಮುಖ್ಯಪ್ರಾಣ ದೇವರನ್ನು ಕುಳ್ಳಿರಿಸಿ ತೇರು ಎಳೆಯಲಾಯಿತು. ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ತೇರು ಎಳೆದರು. ಚೆಂಡೆ ನಾಸಿಕ್ ಬ್ಯಾಂಡ್ ಭಜನೆಯೊಂದಿಗೆ 3 ರಥಗಳು ಗಂಬೀರವಾಗಿ ರಥಬೀದಿಯಲ್ಲಿ ಸಾಗಿ ಬಂದವು. ಬಳಿಕ ಸಂಪ್ರದಾಯದಂತೆ ಸುಡುಮದ್ದು ಪ್ರದರ್ಶನ ನಡೆದು ನೋಡುಗರ ಮನಸೂರೆಗೊಂಡಿತು. ಅಷ್ಟ ಮಠದ ಶ್ರೀಗಳಾದ ಪರ್ಯಾಯ ಪಲಿಮಾರು ಶ್ರೀ, ಸೋದೆ,ಕಾಣಿಯೂರು ಶ್ರೀಗಳು ಉಪಸ್ಥಿತರಿದ್ದರು.

ಕೃಷ್ಣ ಮಠದ ವಾರ್ಷಿಕ ಪರ್ವ ಮಕರ ಸಂಕ್ರಾಂತಿಯ ರಥೋತ್ಸವ ನಡೆದ ಬಳಿಕ ಇಂದು ಬೆಳಗ್ಗೆ ಚೂರ್ಣೋತ್ಸವ ನಡೆಯಿತು. ಸಾವಿಆರು ಭಕ್ತರು ಉತ್ಸವದಲ್ಲಿ ಪಾಲ್ಗೊಂದರು. ಬಳಿಕ ಅವಬೃತ ಸ್ನಾನ ನಡೆಯಿತು. ಈ ಮೂಲಕ ಏಳು ದಿನಗಳಿಂದ ನಡೆಯುತ್ತಿದ್ದ ಸಪ್ಪೋತ್ಸವ ವ ಉಡುಪಿಯಲ್ಲಿ ಸಂಪನ್ನಗೊಂಡಿತು.

Related posts

Leave a Reply

Your email address will not be published. Required fields are marked *