Header Ads
Breaking News

ಕೆಂಜಾರಿನಲ್ಲಿನ ಗೋಶಾಲೆಯ ಗೋವುಗಳು ಬೀದಿಪಾಲು, ಮೂಕ ಪ್ರಾಣಿಗಳ ರೋದನ ಕೇಳುವವರಿಲ್ಲ : ಮಾಜಿ ಮೇಯರ್ ಕವಿತಾ ಸನಿಲ್

ಕೆಂಜಾರಿನಲ್ಲಿ ಗೋಶಾಲೆಯಲ್ಲಿದ್ದ ದನಕರುಗಳು ಇಂದು ಬೀದಿಪಾಲಾಗಿದ್ದರೂ ಚುನಾವಣೆ ಸಂದರ್ಭದಲ್ಲಿ ಗೋವುಗಳ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯ ಸಂಸದ, ಶಾಸಕರು ಮೌನವಾಗಿದ್ದು, ಆ ಮೂಕ ಪ್ರಾಣಿಗಳ ರೋದನ ಕೇಳುವವರಿಲ್ಲ ಎಂದು ಮಾಜಿ ಮೇಯರ್ ಕವಿತಾ ಸನಿಲ್ ಆರೋಪಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ಕೋಟಿ ದೇವರುಗಳು ವಾಸ ಮಾಡುವ ದನಕರುಗಳನ್ನು ಕೆಂಜಾರಿನಲ್ಲಿನ ಗೋಶಾಲೆಯ ಅತಿಕ್ರಮಣ ತೆರವು ಮಾಡುವ ನೆಪದಲ್ಲಿ ಬಿಜೆಪಿಯವರು ಬೀದಿಪಾಲು ಮಾಡಿದ್ದಾರೆ. ಆದರೆ ದೇವರೇ ನೆಲೆಸಿರುವ ದನಕರುಗಳನ್ನು ಮಾತ್ರ ಗೋವುಗಳ ಬಗ್ಗೆ ಮಾತನಾಡುವವರ ಆಡಳಿತವಿದ್ದರೂ ಬೀದಿಪಾಲು ಮಾಡಿ ಅವುಗಳಿಗೆ ಆಶ್ರಯವಿಲ್ಲದಂತೆ ಮಾಡಲಾಗಿದೆ. ಯಾರದ್ದೋ ಮೇಲಿನ ಕ್ರೋಧವನ್ನು ಮೂಕ ಪ್ರಾಣಿಗಳ ಮೇಲೆ ತೀರಿಸಲಾಗಿದೆ. ಇದರ ಶಾಪ ಬಿಜೆಪಿಗರಿಗೆ ತಟ್ಟದಿರದು ಎಂದು ಕವಿತಾ ಸನಿಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ದೀಪಕ್ ಪೂಜಾರಿ, ನೀರಜ್ ಪಾಲ್, ಪುರುಷೋತ್ತಮ ಚಿತ್ರಾಪುರ, ರಜನೀಶ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *