

ಕೆಂಪುಕೋಟೆ, ನವದೆಹಲಿ. ಜ. 26: ಬೆಳಗ್ಗೆ ಗಾಝಿಪುರದಿಂದ ಟ್ರ್ಯಾಕ್ಟರ್ ಮೂಲಕ ಹೊರಟ ರೈತರು ಯಾವುದೇ ಅಡ್ಡಿಗಳಿಲ್ಲದೆ 12.15ಕ್ಕೆ ಕೆಂಪುಕೋಟೆ ತಲುಪಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆ ಅತಿ ಮುಖ್ಯ ಕೇಂದ್ರವಾಗಿದ್ದು, ಪ್ರಧಾನಿಗಳ ಗಣತಂತ್ರ ಪರೇಡ್ ಹಾಗೂ ದೇಶವನ್ನುದ್ದೇಶಿಸಿ ಇಲ್ಲಿಂದಲೇ ಭಾಷಣ ಮಾಡಿದ್ದಾರೆ.
ಈ ಸ್ಥಳವನ್ನು ರೈತರು 50ಕ್ಕೂ ಹೆಚ್ಚು ಟ್ರಾಕ್ಟರ್ಗಳಲ್ಲಿ ತಲುಪಿದ್ದಾರೆ. ಪರೇಡ್ತಡೆಯಲು ಹಾಕಿದ್ದ ಬ್ಯಾರಿಕೇಡ್ಗಳನ್ನು ಮುರಿದು ಕೆಂಪುಕೋಟೆ ಪ್ರದೇಶವನ್ನು ಪ್ರವೇಶಿಸಿದ್ದು, ಪೊಲೀಸರು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವ ಪ್ರಯತ್ನ ಮಾಡಿಲ್ಲ.
ಇನ್ನು ಕೆಲವೇ ನಿಮಿಷಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಈ ಪ್ರದೇಶವನ್ನು ತಲಪುವ ನಿರೀಕ್ಷೆ ಇದೆ.