Header Ads
Breaking News

ಕೆಸಿಎಫ್ ಮುನವ್ವರ ಝೋನ್ ಸಮಿತಿಯ ವಾರ್ಷಿಕ ಮಹಾಸಭೆ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಮುನವ್ವರ ಝೋನ್ ಸಮಿತಿಯ ವಾರ್ಷಿಕ ಮಹಾಸಭೆಯು ಶುಕ್ರವಾರ ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು. ಕೆಸಿಎಫ್ ಐ.ಎನ್.ಸಿ ಶಿಕ್ಷಣ ವಿಭಾಗ ಕನ್ವೀನರ್ ಕಮರುದ್ದೀನ್ ಗೂಡಿನಬಳಿ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕೆಸಿಎಫ್ ಮದೀನಾ ಝೋನ್ ಕಾರ್ಯಕರ್ತರು ಸೇವಾ ಚಟುವಟಿಕೆಗಳಲ್ಲಿ ಗರಿಷ್ಟ ಗುಣಮಟ್ಟ ಹೊಂದಿದವರಾಗಿದ್ದಾರೆ. ಹಜ್ಜ್ ಸಮಯದಲ್ಲಿ ಮದೀನಾ ಹೆಚ್.ವಿ.ಸಿ ಕಾರ್ಯಕರ್ತರ ನಿಸ್ವಾರ್ಥ ಸೇವೆಯು, ಸೌದಿ ಅರೇಬಿಯಾ ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಗೊಂಡಿದೆ ಎಂದರು.ಝೋನ್ ರೀ ಆರ್ಗನೈಸಿಂಗ್ ಆಫೀಸರ್ ಆಗಿ ಆಗಮಿಸಿದ ಫೈಝಲ್ ಕೃಷ್ಣಾಪುರ, ಮುಹಮ್ಮದ್ ಕಲ್ಲರ್ಬೆ ಅವರು ನೂತನ ಸಮಿತಿಯನ್ನು ಆಯ್ಕೆ ಗೊಳಿಸಿದರು. ಕೆಸಿಎಫ್ ಮದೀನಾ ಮುನವ್ವರ ಝೋನ್ ನೂತನ ಸಮಿತಿ ಅಧ್ಯಕ್ಷರಾಗಿ ಹಮೀದ್ ಮುಸ್ಲಿಯಾರ್ ಕರಾಯ, ಪ್ರ.ಕಾರ್ಯದರ್ಶಿಯಾಗಿ ಹುಸೈನಾರ್ ಉರುವಾಲ್ ಪದವು ಹಾಗೂ ಕೋಶಾಧಿಕಾರಿಯಾಗಿ -ಅಶ್ರಫ್ ಹಾಜಿ ಕಿನ್ಯ ಅವರನ್ನು ಆಯ್ಕೆ ಮಾಡಲಾಯಿತು. 5ಇಲಾಖೆಗಳಿಗೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಸೇರಿ 23 ಕಾರ್ಯಕಾರಿ ಸದಸ್ಯರು ಹಾಗೂ ರಾಷ್ಟ್ರೀಯ ಕೌನ್ಸಿಲರ್ ಆಗಿ ೮ಮಂದಿಯನ್ನು ಆಯ್ಕೆ ಮಾಡಲಾಯಿತು.

ಹುಸೈನಾರ್ ಉರುವಾಲ್ ಪದವು, ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ, ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುಸೈನಾರ್ ಉರುವಾಲ್ ಪದವು, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ರು.

Related posts

Leave a Reply

Your email address will not be published. Required fields are marked *