

ಪುತ್ತೂರು: ಆಂದ್ರ ಪ್ರದೇಶದಂತೆ ತಮ್ಮನ್ನು ಸರಕಾರಿ ನೌಕರರನ್ನಾಗಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ನಡೆಯುತ್ತಿದ್ದ ಕೆಎಸ್ ಆರ್ ಟಿ ಸಿ ಸಹಿತ ವಿವಿಧ ಸಾರಿಗೆ ನೌಕರರ ಮುಷ್ಕರ ದಿಢೀರ್ ತೀವ್ರ ಸ್ವರೂಪ ಪಡೆದುಕೊಂಡಿದೆ.ಡಿ.11ರಾಜ್ಯದ ಬಹುತೇಕ ಕಡೆ ಕೆಎಸ್ ಆರ್ ಟಿ ಸಿ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಡಿ12ಕ್ಕೆ ಮುಷ್ಕರದ ಬಿಸಿ ಪುತ್ತೂರಿಗೂ ತಟ್ಟಿದೆ.
ಇತ್ತಿಚೆಗೆ ಜಗನ್ ಮೋಹನ್ ರೆಡ್ಡಿ ಆಂದ್ರ ಸಾರಿಗೆ ನೌಕರರನ್ನು ಸರಕಾರಿ ನೌಕರೆಂದೇ ಪರಿಗಣಿಸಿದ್ದರು. ಬಹಳಷ್ಟು ವರ್ಷಗಳಿಂದ ಈ ಬೇಡಿಕೆ ನೌಕರರ ವರ್ಗದಿಂದ ಇತ್ತು. ಸಾರಿಗೆ ನೌಕರರಿಗೆ ಈಗ ಸರಕಾರಿ ನೌಕರರಂತೆ ಎಲ್ಲಾ ಸೌಲಭ್ಯಗಳಿಲ್ಲ.ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೆಳಗ್ಗಿನಿಂದಲೇ ಬಸ್ಗಳು ಇರಲಿಲ್ಲ. ಇದರ ಮಾಹಿತಿ ಅರಿಯದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಬಂದಿದೆ.
ಮಂಗಳೂರಿನಿಂದ ಬೆಂಗಳೂರು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ದೂರದ ಊರುಗಳಿಗೆ ಸಂಚರಿಸುವ ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಒಂದೆಡೆ ಪ್ರಯಾಣಿಕರ ಕೊರತೆ ಮತ್ತು ರಾಜ್ಯವ್ಯಾಪಿ ಮುಷ್ಕರದ ಹಿನ್ನೆಲೆ ಬಸ್ ಸಂಚಾರ ರದ್ದುಗೊಂಡಿದೆ.ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗಿನ ವೇಳೆ ಬಸ್ ಸಂಚಾರ ಎಂದಿನಂತೆ ಆರಂಭಗೊಂಡಿತ್ತು. ಆದರೆ, ಬೆಳಗ್ಗೆ 10 ಗಂಟೆಯ ಬಳಿಕ ಬಸ್ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿದೆ.ಜಿಲ್ಲೆಯೊಳಗಡೆ ಸೀಮಿತ ಸಂಖ್ಯೆಯಲ್ಲಿ ಬಸ್ ಸಂಚರಿಸುತ್ತಿದ್ದರೂ, ಪ್ರಯಾಣಿಕರು ಕಡಿಮೆ ಇರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಸಮಯದಲ್ಲಿಯೂ ವ್ಯತ್ಯಯ ಉಂಟಾಗಿದೆ.