Header Ads
Breaking News

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ : ಪೂರ್ವಭಾವಿಯಾಗಿ ತಾಲೀಮಿನ ರೂಪದಲ್ಲಿ ದೆಹಲಿಯ ಗಡಿಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆ

ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ಘೋಷಿಸಿದ್ದ ರೈತ ಹೋರಾಟಗಾರರು, ಇದಕ್ಕೆ ಪೂರ್ವಭಾವಿಯಾಗಿ ತಾಲೀಮಿನ ರೂಪದಲ್ಲಿ ದೆಹಲಿಯ ಗಡಿಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು.

ಕಳೆದ 43 ದಿನಗಳಿಂದ ದೆಹಲಿ ಬೆಸೆಯುವ ಎಲ್ಲ ಮುಖ್ಯ ರಸ್ತೆಗಳ ಗಡಿಗಳಲ್ಲಿ ರೈತ ಹೋರಾಟ ನಡೆಸುತ್ತಿದ್ದು, ಸರ್ಕಾರದೊಂದಿಗಿನ ಇದುವರೆಗೆ ಏಳು ಸುತ್ತಿನ ಮಾತುಕತೆ ಫಲ ನೀಡಿಲ್ಲ. ಮಸೂದೆಯನ್ನು ಹಿಂತೆಗೆದುಕೊಳ್ಳದೆ, ರೈತರ ಮನವೊಲಿಸುವ ಯತ್ನದಲ್ಲೇ ಇರುವ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಈ ವಿನೂತನ ಪ್ರತಿಭಟನೆ ನಡೆಸುತ್ತಿರುವುದಾಗಿ ಇತ್ತೀಚೆಗೆ ರೈತ ಸಂಘಟನೆಗಳು ಪ್ರಕಟಿಸಿದ್ದವು. ತಾಲೀಮಿನ ರೂಪದಲ್ಲಿ ಸುಮಾರು ನೂರಾರು ಟ್ರ್ಯಾಕ್ಟರ್‍ಗಳು ಮೆರವಣಿಗೆಯಲ್ಲಿ ಸಾಗಿದವು.

ಹರೆಯದ ಉತ್ಸಾಹಿಗಳಿಂದ ಹಿಡಿದು 70ರ ವಯೋಮಾನ ಹಿರಿಯರು ಈ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ರೈತ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜ. 11ರಂದು ಏಳನೆಯ ಬಾರಿಗೆ ರೈತರೊಂದಿಗೆ ಸಭೆ ನಡೆಸಲು ಮುಂದಾಗಿದ್ದು, ಎರಡು ಮುಖ್ಯ ಬೇಡಿಕೆಗಳು ಚರ್ಚೆಯಾಗಲಿವೆ. ಒಂದು, ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯುವುದು ಮತ್ತು ಕನಿಷ್ಟ ಬೆಂಬಲ ಬೆಲೆ ಕುರಿತು ಚರ್ಚೆ ನಡೆಯಲಿದೆ.
ವರದಿ: ಮಾಸ್ ಮೀಡಿಯಾ ಫೌಂಡೇಶನ್ ದೆಹಲಿ

Related posts

Leave a Reply

Your email address will not be published. Required fields are marked *