Header Ads
Breaking News

ಕೇಂದ್ರ, ರಾಜ್ಯ ಸರ್ಕಾರ ಮೀನುಗಾರರಿಗೆ ಅನ್ಯಾಯವೆಸಗಿದೆ : ಮೀನು ಮಾರ್ಕೆಟಿಂಗ್ ಫೆಡರೇಷನ್‍ನ ಅಧ್ಯಕ್ಷ ಗಣಪತಿ ಮಾಂಗ್ರೆ ಆರೋಪ

2018ರ ಡಿ.15ರಂದು ಮಲ್ಪೆ ಮತ್ತು ಉತ್ತರ ಕನ್ನಡದ ಒಟ್ಟು ಏಳು ಮಂದಿ ಮೀನುಗಾರರೊಂದಿಗೆ ನಾಪತ್ತೆಯಾದ ಮಲ್ಪೆಯ `ಸುವರ್ಣ ತ್ರಿಭುಜ’ ಬೋಟು ಅವಘಡದಲ್ಲಿ ಆಗಿನ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ರಾಜ್ಯದ ಮೀನುಗಾರರಿಗೆ ಅನ್ಯಾಯ ಎಸಗಿವೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಷನ್‍ನ ಅಧ್ಯಕ್ಷ ಗಣಪತಿ ಮಾಂಗ್ರೆ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಒಂದು ವರ್ಷ ಎಂಟು ತಿಂಗಳ ಹಿಂದೆ ಇಡೀ ದೇಶದಲ್ಲಿ ಆತಂಕ ಸೃಷ್ಟಿಸಿದ್ದ ಮಲ್ಪೆಯ ಸುವರ್ಣ ತ್ರಿಭುಜ ಪ್ರಕರಣದಲ್ಲಿ ನಾಪತ್ತೆಯಾದ ಕರಾವಳಿ ಜಿಲ್ಲೆಗಳ ಏಳು ಮಂದಿ ಬಡ ಮೀನುಗಾರರಿಗೆ ನ್ಯಾಯ ದೊರಕಿದೆಯೇ ಎಂದು ಅವರನ್ನು ಪ್ರಶ್ನಿಸಿದಾಗ ಮೇಲಿನಂತೆ ಉತ್ತರಿಸಿದರು.ಏಳು ಮಂದಿ ಮೀನುಗಾರರೊಂದಿಗೆ ಡಿ.13ರಂದು ಆಳಸಮುದ್ರ ಮೀನುಗಾರಿಕೆಗೆ ತೆರಳಿ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ತೀರದಲ್ಲಿ ಡಿ.15ರ ಮಧ್ಯರಾತ್ರಿ ನಂತರ ಹಠಾತ್ತನೆ ಹೊರಗಿನ ಎಲ್ಲಾ ಸಂಪರ್ಕ ಕಡಿದು ಕೊಂಡ ಸುವರ್ಣ ತ್ರಿಭುಜ ಬೋಟಿನ ಅವಘಡದಲ್ಲಿ ನೌಕಾಪಡೆ ಯನ್ನು ರಕ್ಷಿಸುವ ಉದ್ದೇಶದಿಂದ ಪ್ರಕರಣದ ಸತ್ಯವನ್ನು ಮುಚ್ಚಿಡಲಾಗಿದೆ ಎಂದ ಅವರು, ನೌಕಾ ಪಡೆಯ ಕೆಲವು ಅಧಿಕಾರಿಗಳು ಸತ್ಯ ಹೇಳಲು ಕೊನೆಯ ಕ್ಷಣದಲ್ಲಿ ಹಿಂಜರಿದರು ಎಂದರು.

ಬೋಟು ಅವಘಡಕ್ಕೆ ಯಾರು ಕಾರಣ ಹಾಗೂ ಮೀನುಗಾರರ ನಾಪತ್ತೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಈ ಅವಘಡ ಮಾಡಿರುವುದನ್ನು ಒಪ್ಪಿಕೊಂಡರೆ, ಏಳು ಮಂದಿ ಮೀನುಗಾರರ ರಕ್ಷಣೆ ಮಾಡಲು ಸಾಧ್ಯವಾಗದೇ ಇರುವವರು ದೇಶದ ರಕ್ಷಣೆ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಅಂಜಿ ಸತ್ಯ ಒಪ್ಪಿಕೊಳ್ಳಲು ಹಿಂಜರಿಯುತಿದ್ದಾರೆ ಎಂದ ಗಣಪತಿ ಮಾಂಗ್ರೆ, ನೌಕಾ ಪಡೆ, ತಾವು ಅವಘಡಕ್ಕೆ ಕಾರಣ ಎಂಬುದನ್ನು ಬಹಿರಂಗ ವಾಗಿ ಒಪ್ಪಿಕೊಂಡಿದೆಯೇ ಎಂದು ಪ್ರಶ್ನಿಸಿದಾಗ ತಿಳಿಸಿದರು.

Related posts

Leave a Reply

Your email address will not be published. Required fields are marked *