Header Ads
Breaking News

ಕೇಂದ್ರ ಸರ್ಕಾರದಿಂದ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ವಿಚಾರ:ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಶಾಸಕ ಎಸ್. ಅಂಗಾರ

ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರಕಾರದ ವತಿಯಿಂದ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳು ಜನರಿಗೆ ಯಾವ ರೀತಿ ಸಿಗಲಿದೆ ಎಂಬುದು ವಿತ್ತ ಸಚಿವರು ವಿವರಣೆ ನೀಡುವುದು ಪೂರ್ಣಗೊಂಡ ಕೂಡಲೇ ಗೊತ್ತಾಗಲಿದೆ” ಎಂದು ಶಾಸಕ ಅಂಗಾರ ತಿಳಿಸಿದರು. ಕೊರೊನನಾ ಸಂದರ್ಭದ ಲಾಕ್‍ಡೌನ್‍ನ ವೇಳೆ ಜನರು ಸಂಕಷ್ಟಕ್ಕೊಳಗಾಗದಂತೆ ಕ್ರಮ ಕೈಗೊಂಡ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಕೃತಜ್ಞತೆ ಸಲ್ಲಿಸಿದರು.

ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಪ್ರಧಾನಿಯವರು ಕೃಷಿ ಸಮ್ಮಾನ್ ಖಾತೆಗೆ 2000 ರೂ. ಹಾಗೂ ಜನ್‍ಧನ್ ಖಾತಗೆ ರೂ. 500 ಜಮೆ ಮಾಡಿದ್ದಾರೆ. ಉಜ್ವಲ್ ಯೋಜನೆಯವರಿಗೆ ಉಚಿತವಾಗಿ ಗ್ಯಾಸ್ ನೀಡಿದ್ದಾರೆ. ಈಗ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ರಾಜ್ಯ ಸರಕಾರ ಎರಡು ತಿಂಗಳ ಪಡಿತರ ನೀಡಿದೆ. ವೃದ್ದರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಕೊಡುವ ವೇತನ ಎರಡು ತಿಂಗಳ ಮೊತ್ತವನ್ನು ಮೊದಲೇ ನೀಡಿದ್ದಾರೆ” ಎಂದು ಶಾಸಕರು ಹೇಳಿದರು.
ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕರಿಗೆ ಸಹಾಯಧನ ದೊರೆಯದೆನ್ನುವ ಮಾಹಿತಿಯ ಬಗ್ಗೆ ಪತ್ರಕರ್ತರು ಕೇಳಿದಾಗ,  ರಿಕ್ಷಾದವರು ನನ್ನ ಗಮನಕ್ಕೆ ತಂದಿದ್ದಾರೆ. ನಿಬಂಧನೆಗಳಲ್ಲಿ ಕೆಲವು ಲೋಪದೋಷಗಳಾಗಿವೆ. ಆ ಬಗ್ಗೆ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಅದನ್ನು ಸರಕಾರ ಸರಿಪಡಿಸಲಾಗುತ್ತದೆ” ಎಂದು ಶಾಸಕ ಅಂಗಾರ ತಿಳಿಸಿದರು. “ವಿದ್ಯುತ್ ಬಿಲ್ ಹೆಚ್ಚು ಬಂದಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ” ಎಂದು ಹೇಳಿದ ಶಾಸಕರು “ಸುಳ್ಯದ 110 ಕೆ.ವಿ. ವಿದ್ಯುತ್ ವಿತರಣಾ ಕಾಮಗಾರಿಯ ವಿದ್ಯುತ್ ಲೈನ್‍ಗೆ ಅರಣ್ಯ ಭೂಮಿ ಮಂಜೂರಾತಿಯ ವಿಚಾರ ಮುಖ್ಯಮಂತ್ರಿಗಳಲ್ಲಿ ಫೆಂಡಿಂಗ್ ಇದೆ. ಈ ಕೊರೊನಾ ಗಲಾಟೆ ಮುಗಿದ ಕೂಡಲೇ ಆ ಬಗ್ಗೆ ಮತ್ತೊಮ್ಮೆ ನೆನಪಿಸಿ ಅರಣ್ಯ ಭೂಮಿ ಮಂಜೂರಾಗುವಂತೆ ಮಾಡುತ್ತೇವೆ” ಎಂದರು.

Related posts

Leave a Reply

Your email address will not be published. Required fields are marked *