Header Ads
Breaking News

ಕೇಂದ್ರ ಸಾಹಿತ್ಯ ಅಕಾಡೆಮಿ ವೆಬ್‍ಸರಣಿ : ಡಾ.ರಾಜಶೇಖರ ಹಳೆಮನೆ ಸಣ್ಣಕಥೆ ಆಯ್ಕೆ

ಕೇಂದ್ರ ಸಾಹಿತ್ಯ ಅಕಾಡೆಮಿಯು ಕನ್ನಡ ಸಣ್ಣಕಥೆಗಳ ವಿಡಿಯೋ ಪ್ರಸ್ತುತಿಯ ಉದ್ದೇಶದೊಂದಿಗೆ ಆರಂಭಿಸಿದ ವೆಬ್‍ಲೈನ್ ಸಾಹಿತ್ಯ ಸರಣಿಗಾಗಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಅವರು ಬರೆದ ‘ಕೆಂಡ ಉಂಡ ಬೆಳದಿಂಗಳು’ ಶೀರ್ಷಿಕೆಯ ಕಥೆಯನ್ನು ಆಯ್ಕೆ ಮಾಡಿದೆ.

ವೆಬ್‍ಲೈನ್ ಮೂಲಕ ರಾಜಶೇಖರ ಹಳೆಮನೆ ಅವರ ಕಥಾವಾಚನದ ವಿಡಿಯೋವನ್ನು ಅಕಾಡೆಮಿಯು ಪ್ರಸಾರ ಮಾಡಿದೆ. ವಸಾಹತೋತ್ತರ ಕಾಲಘಟ್ಟದ ಗ್ರಾಮೀಣ ರೈತ ಕುಟುಂಬಗಳು ಎದುರಿಸಿದ ತಲ್ಲಣಗಳನ್ನು ಈ ಕಥೆ ಬಿಂಬಿಸಿದೆ. ನಗರಕೇಂದ್ರಿತ ಅಭಿವೃದ್ಧಿಯ ಆವರಣದಲ್ಲಿ ಆದ್ಯತೆ ಪಡೆದುಕೊಳ್ಳದ ರೈತಸಮುದಾಯ ಅನುಭವಿಸುವ ಸಂಕಟಗಳನ್ನು ಅಂತಃಕರಣದ ಭಾಷಿಕ ನಿರೂಪಣೆಯೊಂದಿಗೆ ದಾಖಲಿಸಿದ ಕಾರಣಕ್ಕಾಗಿ ಈ ಕಥೆ ಅಕಾಡೆಮಿಯ ವೆಬ್‍ಲೈನ್ ಸಾಹಿತ್ಯ ಸರಣಿಗಾಗಿ ಆಯ್ಕೆಯಾಗಿದೆ.

Related posts

Leave a Reply

Your email address will not be published. Required fields are marked *