Header Ads
Breaking News

ಕೇಂದ್ರ ಹಣಕಾಸು ಸಚಿವೆಯ ವೈಫಲ್ಯದಿಂದಲೇ ಜಿಡಿಪಿ ಕುಸಿತ : ಯು.ಟಿ ಖಾದರ್ ಖಾದರ್

ಕೇಂದ್ರ ಹಣಕಾಸು ಸಚಿವೆಯ ವೈಫಲ್ಯದಿಂದಲೇ ಜಿಡಿಪಿ ಕುಸಿತವಾಗಿದೆ. ದೇಶಕ್ಕೆ ಒಳಿತು ಆಗಬೇಕಿದ್ದರೆ ಅವರನ್ನು ಬದಲಾಯಿಸಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದರು.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ರಾಜ್ಯದ ಜಿಎಸ್‍ಟಿ ಪಾಲನ್ನು ಕೊಡದೆ ಕೇಂದ್ರ ಅನ್ಯಾಯ ಮಾಡಿದೆ.ಆರ್‍ಬಿಐ ಸಾಲದ ಪ್ರಸ್ತಾಪವನ್ನು ರಾಜ್ಯ ಸರಕಾರ ತಿರಸ್ಕರಿಸಲಿ. ರಾಜ್ಯದ ಹಕ್ಕನ್ನು ಪಡೆಯಲು ರಾಜ್ಯ ಸರಕಾರ ಹೋರಾಡಬೇಕು. ರಾಜ್ಯದ ಹಕ್ಕಿಗಾಗಿ ಸಂಸದರು ಸೇರಿ ಸಂಸತ್ ಮುಂದೆ ಧರಣಿ ನಡೆಸಲಿ.ರಾಜ್ಯದ ಹಕ್ಕನ್ನು ಪಡೆಯುವುದು ಸ್ವಾಭಿಮಾನ, ಗೌರವದ ಪ್ರಶ್ನೆಯಾಗಿದೆ. ಕೇಂದ್ರ ಸರಕಾರ ಆಡಳಿತದ ಪ್ರತಿ ಕ್ಷೇತ್ರದಲ್ಲೂ ವಿಫಲವಾಗಿದೆ. ತಮ್ಮ ವೈಫಲ್ಯಕ್ಕೆ ಕೇಂದ್ರ ಸಚಿವರು ದೇವರನ್ನು ದೂಷಣೆ ಮಾಡ್ತಿದ್ದಾರೆ. ಕೇಂದ್ರದ ಧೋರಣೆ ಆಕ್ಟ್ ಆಫ್ ಗಾಡ್ ಅಲ್ಲ, ಆಕ್ಟ್ ಆಫ್ ಫ್ರಾಡ್ ಆಗಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಯು.ಟಿ ಖಾದರ್ ವಾಗ್ದಾಳಿ ನಡೆಸಿದರು.ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *