Header Ads
Breaking News

ಕೇರಳ ರಾಜ್ಯದಲ್ಲಿ 14ಮಂದಿಗೆ ಕೊರೊನಾ ಪಾಸಿಟಿವ್

ಕಾಸರಗೋಡು: ಜಿಲ್ಲೆಯಲ್ಲಿ ಒಬ್ಬರು ಒಳಗೊಂಡಂತೆ ಕೇರಳದಲ್ಲಿ ಭಾನುವಾರ ಕೋವಿಡ್-19 ವೈರಸ್‍ನ 14ಪ್ರಕರಣ ದಾಖಲಾಗಿದೆ. ಮಲಪ್ಪುರಂ ಜಿಲ್ಲೆಯ ನಾಲ್ವರು, ಕಣ್ಣೂರು, ಕೋಯಿಕ್ಕೋಡ್, ಪಾಲಕ್ಕಾಡ್‍ನಲ್ಲಿ ತಲಾ ಇಬ್ಬರು, ತ್ರಿಶೂರ್, ಎರ್ನಾಕುಳಂ ಹಾಗೂ ಕೊಲ್ಲಂನ ತಲಾ ಒಬ್ಬರು ಇತರ ಸೋಂಕಿತರು. ಸೋಂಕಿತರಲ್ಲಿ ಇಬ್ಬರು ವಿದೇಶದಿಂದ ಆಗಮಿಸಿದ್ದರೆ, ಏಳುಮಂದಿ ತಮಿಳ್ನಾಡಿನಿಂದ, ಇಬ್ಬರು ಮಹಾರಾಷ್ಟ್ರದಿಂದ ಆಗಮಿಸಿದ್ದರೆ, ಒಬ್ಬರು ಮಾಲ್ಡೀವ್ಸ್‍ನಿಂದ ಆಗಮಿಸಿದ ಉತ್ತರಪ್ರದೇಶ ನಿವಾಸಿ ಹಾಗೂ ಇನ್ನೊಬ್ಬರು ಕೊಲ್ಲಂ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಒಳಗೊಂಡಿದ್ದಾರೆ. ರಾಜ್ಯದಲ್ಲಿ ಚಿಕಿತ್ಸೆಯಲ್ಲಿರುವವರಲ್ಲಿ ಭಾನುವಾರ ಯಾರೂ ಗುಣಮುಖರಾಗಿಲ್ಲ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2162ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 1887ಮಂದಿ ಮನೆಗಳಲ್ಲಿ ಹಾಗೂ 275ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಭಾನುವಾರ ಹೊಸದಾಗಿ 20ಮಂದಿಯನ್ನು ಐಸೊಲೇಶನ್ ವಾರ್ಡಿಗೆ ದಾಖಲಿಸಲಾಗಿದೆ.

Related posts

Leave a Reply

Your email address will not be published. Required fields are marked *