
ಪ್ರತಿ ವರ್ಷ ಡಿಸೆಂಬರ್, ಜನವರಿ ತಿಂಗಳು ಬಂತು ಅಂದ್ರೆ ಸಾಕು, ಕರಾವಳಿ ಉದ್ದಕ್ಕೂ ಅಯ್ಯಪ್ಪ ಮಾಲಾಧಾರಿಗಳು ಕಂಡು ಬರ್ತಾ ಇದ್ರು. ಆದ್ರೆ ಈ ವರ್ಷ ಕೊವಿಡ್ ಕಾರಣಕ್ಕಾಗಿ ಕೇರಳ ಸರ್ಕಾರ ಕಠಿಣ ನಿಯಮಗಳನ್ನು ಕಡ್ಡಾಯ ಮಾಡಿ, ಆದೇಶ ಹೊರಡಿಸಿದೆ. ಹೀಗಾಗಿ ಕೇರಳ ಸರಕಾರದ ವಿರುದ್ಧ ಉಡುಪಿಯ ಅಯ್ಯಪ್ಪ ಭಕ್ತರು, ಶಬರಿಮಲೆಗೆ ತೆರಳದೆ “ಭವನಂ ಸನ್ನಿಧಾನಂ” ಅಂತ ಹೊಸ ಅಭಿಯಾನ ಶುರು ಮಾಡುದಕ್ಕೆ ನಿರ್ಧರಿಸಿದ್ದಾರೆ.