Header Ads
Breaking News

ಕೈಪುಂಜಾಲ್‍ನಲ್ಲಿ ಸಾಂಕೇತಿಕ ಸಫರ್ ಝಿಯಾರತ್ : ಅಕ್ಟೋಬರ್ 14ರಂದು ನಡೆಯಲಿರುವ ಕಾರ್ಯಕ್ರಮ

ಕಾಪುವಿನಪೊಲಿಪು ಜಾಮಿಯಾ ಮಸೀದಿಯ ಆಡಳಿತ ಸಮಿತಿಯ ಅಧೀನಕ್ಕೊಳಪಟ್ಟ ಕೈಪುಂಜಾಲು ಸೈಯದ್ ಅರಬೀ ವಲಿಯುಲ್ಲಾರವರ ದರ್ಗಾದಲ್ಲಿ ಅಕ್ಟೋಬರ್ 14 ರಂದು ಸಂಪ್ರದಾಯಕ್ಕೆ ಅನುಸಾರವಾಗಿ ಸಾಂಕೇತಿಕ ಸಫರ್ ಝಿಯಾರತ್ ಕಾರ್ಯಕ್ರಮವು ನಡೆಯಲಿರುವುದಾಗಿ ಆಡಳಿತ ಸಮಿತಿ ಉಪಾಧ್ಯಕ್ಷ ಅಮೀರ್ ಹಂಝ ಕಾಪು ತಿಳಿಸಿದ್ದಾರೆ.

ಕಾಪು ಪ್ರೆಸ್‍ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ವರ್ಷವು ಬಹಳ ವಿಜ್ರಂಭಣೆಯಿಂದ ಆಚರಿಸುತ್ತಿದ್ದ ಸಫರ್ ಝಿಯಾರತ್ ಕಾರ್ಯಕ್ರಮ ಕೋವಿಡ್ ವೈರಸ್ ಕಾಯಿಲೆಯ ಹಿನ್ನೆಲೆ ಸಾಂಕೇತಿಕವಾಗಿ ಆಚರಿಸಲಾಗುತ್ತಿದ್ದು, ಕಾಪು ಪೊಲಿಪು ಜಾಮಿಯಾ ಮಸೀದಿಯ ಜಮಾತ್ ಬಾಂಧವರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು 60 ವರ್ಷಕ್ಕೆ ಮೇಲ್ಪಟ್ಟವರು ಹಾಗು ಇತರ ಜಮಾತ್ ಬಾಂಧವರಿಗೆಝಿಯಾರತ್ ಗೆ ಬರಲು ಅವಕಾಶ ಇರುವುದಿಲ್ಲ.ಈ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸಿ ಸಾರ್ವಜನಿಕರು ಸಹಕರಿಸಬೇಕೆಂದು ಅವರು ವಿನಂತಿಸಿದ್ದಾರೆ. ಈ ಸಂದರ್ಭ ಕೋಶಾಧಿಕಾರಿ ಶೇಕಜ್ ನಝೀರ್, ಸದಸ್ಯರಾದ ಎಚ್.ಅಬ್ದುಲ್ಲಾ, ಅಬ್ದುಲ್ ಹಫೀಝ್,ಇಮ್ತಿಯಾಝ್ ಅಹಮದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *