Header Ads
Breaking News

ಕೈಯನ್ನು ಸ್ಪರ್ಶಿಸದೆ ಸ್ಯಾನಿಟೈಸರ್ ಬಳಕೆ ಅವಿಷ್ಕಾರ : ವಿದ್ಯಾರ್ಥಿಯೊಬ್ಬರಿಂದ ಮಿನಿವಿಧಾನಸೌಧ, ಪೊಲೀಸ್ ಠಾಣೆಗೆ ಕೊಡುಗೆ

ಪುತ್ತೂರು: ಕೋವಿಡ್ -19 ಸಂಕಷ್ಟದ ಸಮಯದಲ್ಲಿ ತಾನು ಕಂಡು ಹಿಡಿದ ವೈಜ್ಞಾನಿಕ ಅವಿಷ್ಕಾರದ ಮೂಲಕ ಕೈಯನ್ನು ಸ್ಪರ್ಶಿಸದೆ ಸ್ಯಾನಿಟೈಸರ್ ಬಳಕೆಯನ್ನು ಕಂಡು ಹಿಡಿದ ಪರ್ಲಡ್ಕ ನಿವಾಸಿ ದರ್ಬೆ ಬೆಥನಿ ಆಂಗ್ಲ ಮಾದ್ಯಮದ ನಿಹಾಲ್ ಅವರು ಪುತ್ತೂರು ಮಿನಿವಿಧಾನ ಸೌಧಕ್ಕೆ ಮತ್ತು ಪುತ್ತೂರು ನಗರ ಪೊಲೀಸ್   ಠಾಣೆಗೆ ಕೊಡುಗೆಯಾಗಿ ನೀಡಿದ್ದಾರೆ.

ಪರ್ಲಡ್ಕ ನಿವಾಶಿ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿಹಾಲ್ ಅವರು ಲಾಕ್‍ಡೌನ್ ಸಂದರ್ಭದಲ್ಲಿ ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೈಯಿಂದ ಮುಟ್ಟದೆ ಸ್ಯಾನಿಟೈಸರ್ ಬಳಕೆಯನ್ನು ಅವಿಷ್ಕಾರಿಸಿದ್ದಾರೆ. ಈ ಅವಿಷ್ಕಾರವನ್ನು ಶಾಸಕ ಸಂಜೀವ ಮಠಂದೂರು ಅವರು ಮಿನಿ ವಿಧಾನ ಸೌಧದಲ್ಲಿ ಉದ್ಘಾಟಿಸಿದರು. ಪಿವಿಸಿ ಪೈಪ್ ಮೂಲಕ ಸ್ಯಾನಿಟೈಸರ್‍ನ್ನು ಸ್ಪರ್ಶ ಮಾಡುವ ಈ ಸಾಧನವನ್ನು ಕಾಲಿನ ಮೂಲಕ ಸಾಧನದ ಕೆಳ ಭಾಗದಲ್ಲಿ ಸ್ಪರ್ಶ ಮಾಡಬೇಕು. ಆಗ ಸ್ಯಾನಿಟೈಸರ್ ಕೈಗೆ ಸಿಂಪಡಣೆ ಆಗುತ್ತದೆ ಎಂದು ನಿಹಾಲ್ ಅವರು ಶಾಸಕರಿಗೆ ವಿವರಿಸಿದರು. ನಿಹಾಲ್ ಅವರು ಒಂದು ಸಾಧನವನ್ನು ಪುತ್ತೂರು ನಗರಪೊಲೀಸ್   ಠಾಣೆಗೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು ಟಿ, ಶಾಸಕರ ಆಪ್ತ ಸಹಾಯಕ ವಸಂತ ವೀರಮಂಗಲ, ಬಿಜೆಪಿ ಜಿಲ್ಲಾ ಮೋರ್ಛಾದ ಉಮ್ಮರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *