Header Ads
Header Ads
Breaking News

ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆದ ಗುರುಪೂರ್ಣಿಮಾ ಮಹೋತ್ಸವ

ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಕೊಡಿಯಾಲ್‌ಬೈಲ್‌ನ ಎಸ್. ಡಿ. ಎಮ್. ಲಾ ಕಾಲೇಜ್‌ನಲ್ಲಿ ಗುರುಪೂರ್ಣಿಮಾ ಮಹೋತ್ಸವ ನಡೆಯಿತು. ’ಧರ್ಮಾಧಿಷ್ಠಿತ ’ಹಿಂದೂ ರಾಷ್ಟ್ರದ ಸ್ಥಾಪನೆಯ ಆವಶ್ಯಕತೆ ಹಾಗೂ ಹಿಂದೂಗಳ ಯೋಗದಾನ’ ಈ ವಿಷಯದ ಬಗ್ಗೆ ಸೌ.ಮಂಜುಳಾ ಗೌಡ ಮಾರ್ಗದರ್ಶನ ನೀಡಿದ್ರು. ಇದರೊಂದಿಗೆ ಇತರ ಸಮವಿಚಾರಿ ಸಂಘಟನೆಗಳೊಂದಿಗೆ ದೇಶದಾದ್ಯಂತ 119 ಸ್ಥಳಗಳಲ್ಲಿ ಭಾವಪೂರ್ಣ ವಾತಾವರಣದಲ್ಲಿ ಇಂತಹ ’ಗುರುಪೂರ್ಣಿಮಾ ಮಹೋತ್ಸವವನ್ನು’ ಆಚರಿಸಲಾಯಿತು. ವಿಶೇಷ ಅತಿಥಿಗಳಾದ ಶ್ರೀ. ಕೃಷ್ಣ ಉಪಾಧ್ಯಾಯ ಇವರು ಹಲವಾರು ವರ್ಷಗಳಿಂದ ಸನಾತನ ಪ್ರಭಾತ ವಿತರಣೆ ಮಾಡುವ ಸನಾತನದ ಸಾಧಕರಾದ ಸೌ. ಸರಸ್ವತಿ ನಾಯ್ಕ್ ಇವರ ಸತ್ಕಾರ ಮಾಡಿದರು. ಆನಂತರ ಪ್ರತಿಭಾವಂತ ವಿದ್ಯಾರ್ಥಿನಿಯಾದ ಕು. ಮಂಜೂಷ ಪೈ ಇವರ ಸತ್ಕಾರ ಮಾಡಲಾಯಿತು. ನಂತರ ಶ್ರೀ. ಕೃಷ್ಣ ಉಪಾಧ್ಯಾಯ ಇವರು ತಮ್ಮ ಗುರುಗಳಾದ ಶ್ರೀ ಗೌತಮಾನಂದ ಸ್ವಾಮೀಜಿ ಇವರನ್ನು ಸ್ಮರಿಸುತ್ತಾ ತಮ್ಮ ವಿಷಯವನ್ನು ಮಂಡಿಸಿದ್ದರು. ಈ ಸಂದರ್ಭ ಶ್ರೀಮತ್ಪರಮಹಂಸ ಚಂದ್ರಶೇಖರಾನಂದ, ಶ್ರೀ ಅನಂತಾನಂದ ಸಾಯಿಶ, ಸನಾತನ ಸಂಸ್ಥೆಯ ಶ್ರದ್ಧಾಸ್ಥಾನವಾಗಿರುವ ಸಂತ ಭಕ್ತರಾಜ ಮಹಾರಾಜ, ಪ.ಪೂ. ರಾಮಾನಂದ ಮಹಾರಾಜ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *