Header Ads
Header Ads
Breaking News

ಕೊಡಿಯಾಲ್‍ಬೈಲ್‍ನ ಶಾರದ ಎಜುಕೇಶನಲ್ ಇನ್‍ಸ್ಟಿಟ್ಯೂಶನ್ಸ್ ವತಿಯಿಂದ ಹೊನಲು ಬೆಳಕಿನ ಕ್ರೀಡೊತ್ಸವ-2019

ಶಾರದ ಎಜುಕೇಶನಲ್ ಇನ್‍ಸ್ಟಿಟ್ಯೂಶನ್ಸ್ ಕೊಡಿಯಾಲ್‍ಬೈಲ್ ಇವರ ವತಿಯಿಂದ “ಹೊನಲು ಬೆಳಕಿನ ಕ್ರೀಡೊತ್ಸವ 2019” ಮಂಗಳೂರಿನ ಕೊಡಿಯಾಬೈಲ್‍ನ ಶಾರದ ವಿದ್ಯಾಲಯದ ಆವರಣದಲ್ಲಿ ನಡೆಯಿತು.ಕ್ರೀಡೋತ್ಸವವನ್ನು ಮಂಗಳೂರು ವಿಶ್ವವಿದ್ಯಾನಿಯದ ವೈಸ್ ಚಾನ್ಸೆಲ್ಲರ್ ಡಾ.ಸುಬ್ರಮಣ್ಯ ಯಡಪಡಿತ್ತಾಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು. ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನ ಶಾರದಾ ಇನ್‍ಸ್ಟಿಟ್ಯೂಶನ್‍ನ ಅಧ್ಯಕ್ಷ ಎಮ್.ಬಿ.ಪುರಾಣಿಕ್ ಸ್ವಾಗತಿಸಿದ್ರು. ಬಳಿಕ ವಿದ್ಯಾರ್ಥಿಗಳಿಂದ ನಡೆದ ಮನೋರಂಜನಾ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಶಾಸಕ ವೈ.ಭರತ್ ಶೆಟ್ಟಿ, ಮಂಗಳೂರು ಪೊಲೀಸ್ ಕಮೀಶನರ್ ಡಾ.ಪಿ.ಎಸ್.ಹರ್ಷ, ಪೊಲೀಸ್ ಕಮೀಶನರ್ ಶ್ರೀಕಾಂತ್ ರಾವ್, ಶಾರದ ಇನ್‍ಸ್ಟಿಟ್ಯೂಶನ್‍ನ ಕಾರ್ಯದರ್ಶಿ ಎಮ್.ಎಸ್.ಶಾಸ್ತ್ರಿ, ಟ್ರಸ್ಟಿ ಎಸ್.ಪ್ರದೀಪ್ ಕುಮಾರ್, ಟ್ರಸ್ಟಿ ಡಾ.ಸೀತಾರಾಮ್ ಭಟ್ ದಂಡತೀರ್ಥ, ಟ್ರಸ್ಟಿ ಸುಧಾಕರ್ ರಾವ್ ಪೇಜಾವರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *