Header Ads
Breaking News

ಕೊಣಾಜೆ ಭಜನಾ ಮಂದಿರ ಅಪವಿತ್ರಗೊಳಿಸಿದ ಪ್ರಕರಣ : ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನ

ಕೊಣಾಜೆ ಬಳಿಯ ಗೋಪಾಲಕೃಷ್ಣ ಭಜನಾ ಮಂದಿರದ ಒಳಗೆ ಮಲ, ಮೂತ್ರ ವಿಸರ್ಜಿಸಿ ಅಪವಿತ್ರಗೊಳಿಸಿದ ಕೃತ್ಯಕ್ಕೆ ಸಂಬಂಧಿಸಿ ಪೊಲೀಸ್ ರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತಲಪಾಡಿಯ ಕೊಮರಂಗಳ ನಿವಾಸಿ ಮಹಮ್ಮದ್ ಸೊಹೈಲ್ ಮತ್ತು ತಲಪಾಡಿಯ ಪಿಲಿಕೂರು ನಿವಾಸಿ ನಿಜಾಮುದ್ದೀನ್ ಬಂಧಿತ ಆರೋಪಿಗಳು. ವಿವಿಧೆಡೆ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದ್ದ ಇಬ್ಬರು ಯುವಕರ ಕೃತ್ಯದ ಬೆನ್ನತ್ತಿ ಹೋದ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಗೋಪಾಲಕೃಷ್ಣ ಮಂದಿರಕ್ಕೆ ಕಾಣಿಕೆ ಹುಂಡಿಯಿಂದ ಹಣ ಕಳವು ಮಾಡಲು ನುಗ್ಗಿದ್ದರು. ಆದರೆ, ಅಲ್ಲಿ ಯಾವುದೇ ರೀತಿಯ ಹಣವಾಗಲೀ, ಬೆಲೆಬಾಳುವ ಆಭರಣಗಳಾಗಲೀ ಸಿಕ್ಕಿರಲಿಲ್ಲ. ಕಾಣಿಕೆ ಡಬ್ಬಿ ಒಡೆದ ಕೃತ್ಯ ಬೇರೆ ಯಾರೋ ಮಾಡಿದ್ದಾರೆ ಎನ್ನುವ ರೀತಿ ಬಿಂಬಿಸಲು ಮಲ, ಮೂತ್ರ ವಿಸರ್ಜಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಶಶಿಕುಮಾರ್, ಇವರ ತಂಡದಲ್ಲಿ ಇನ್ನೂ ಆರು ಮಂದಿ ಇದ್ದಾರೆ ಎನ್ನುವುದು ಗೊತ್ತಾಗಿದೆ. ಇದಲ್ಲದೆ ಕೋಣಾಜೆ, ಉಳ್ಳಾಲ, ಕಂಕನಾಡಿ ಗ್ರಾಮಾಂತರ, ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಒಂಬತ್ತು ಕಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕಂಡುಬಂದಿದೆ. ಈ ಪೈಕಿ ಐದು ದೈವಸ್ಥಾನದ ಹುಂಡಿ ಕಳವು ಪ್ರಕರಣಗಳಾಗಿವೆ. ಕೋಣಾಜೆಯಲ್ಲಿ ಮಂದಿರದ ಕೃತ್ಯ ನಡೆಯುವುದಕ್ಕೂ ಸ್ವಲ್ಪ ದಿನಗಳ ಹಿಂದೆ ಅಲ್ಲಿಯೇ ಸಮೀಪದಲ್ಲಿ ದೈವಸ್ಥಾನ ಒಂದರ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದರು. ಅದರಲ್ಲಿ ಹಣ ಕಳವುಗೈದು, ಕಾಣಿಕೆ ಡಬ್ಬಿಯನ್ನು ಗೋಪಾಲಕೃಷ್ಣ ಮಂದಿರದ ಬಳಿ ಎಸೆದಿದ್ದರು. ಅದೇ ದಿನ ಗೋಪಾಲಕೃಷ್ಣ ಮಂದಿರಕ್ಕೂ ನುಗ್ಗಲು ಪ್ಲಾನ್ ಹಾಕಿದ್ದರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಮ್ ಶಂಕರ್ ಮತ್ತು ವಿನಯ ಗಾಂವ್ಕರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *