Header Ads
Header Ads
Breaking News

ಕೊರಗಜ್ಜನ ಕಾರ್ಣಿಕಕ್ಕೆ ವೃಷಬ್ ಶೆಟ್ಟಿ ಬೆರಗು : ರಾತ್ರೋ ರಾತ್ರಿ ಬಂದು ಕೊರಗಜ್ಜನಿಗೆ ಕಾಣಿಕೆ

ಕರಾವಳಿಯಾದ್ಯಂತ ಕೊರಗಜ್ಜ ದೈವದ ಪವಾಡ ನಡೆಯುತ್ತಿರುವುದು ಇದೇ ಮೊದಲಲ್ಲ. ವಿವಿಧ ರೀತಿಯಲ್ಲಿ ಕೊರಗಜ್ಜನ ಪವಾಡಕ್ಕೆ ಭಕ್ತ ಸಮೂಹವೇ ಬೆರಗಾಗಿದ್ದಾರೆ. ಚಿತ್ರ ನಟರಿಗೂ ತಮ್ಮ ಜೀವನದಲ್ಲಿ ಕೊರಗಜ್ಜನ ಆಶೀರ್ವಾದ ಇರುವುದಕ್ಕೆ ಇಂಬು ಸಿಕ್ಕಿದೆ. ಶ್ರೀಮನ್ನಾರಾಯಣನಿಗೂ ಹಾಗೂ ಡಿಟೆಕ್ಟಿವ್ ದಿವಾಕರಿಗೂ ಕೊರಗಜ್ಜನ ಅಭಯ ಹಸ್ತ ನೀಡಿದ್ದಾನೆ..ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ 

ಕರಾವಳಿ ದೈವಗಳ ನಾಡು..ಇಲ್ಲಿ ದೇವರಿಗಿಂತ ದೈವಗಳಿಗೇ ಹೆಚ್ಚು ಪ್ರಾಶಸ್ತ್ಯ ಹಾಗೂ ಕಾರಣೀಕ ಸೃಷ್ಟಿಸುವಂತದ್ದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಕೊರಗಜ್ಜನ ಪವಾಡ ಸೃಷ್ಟಿಯಾಗುತ್ತಿರುವ ನಿದರ್ಶನಗಳು ಹಲವು ಕಡೆ ನಡೆದಿದೆ. ಕರಾವಳಿಯ ಮೋಸ್ಟ್ ಫೇಮಸ್ ನಟರ ಬಾಳಿನಲ್ಲೂ ಕೊರಗಜ್ಜ ಪವಾಡ ಸೃಷ್ಟಿಸಿದ್ದು ಇದೀಗ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಹರಕೆ ತೀರಿಸಿದ್ದಾರೆ. ಹೌದು ಸ್ಯಾಂಡಲ್ ವುಡ್ ನ ಕಿರಿಕ್ ಹುಡುಗ, ಶ್ರೀಮನ್ನಾರಾಯಣ.. ರಕ್ಷಿತ್ ಶೆಟ್ಟಿ ಹಾಗೂ ಡಿಟೆಕ್ಟಿವ್ ದಿವಾಕರ್ ಆಗಿ ಫೇಮಸ್ ಆಗಿರುವ ವೃಷಬ್ ಶೆಟ್ಟಿಗೂ ಕೊರಗಜ್ಜನ ಮಹಿಮೆ ಇದೆಯಂತೆ. ಉಡುಪಿ ಬೈಲೂರು ಬಳಿ ಇರುವ ನೀಲಕಂಠ ಮಹಾ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಕೊರಗಜ್ಜನ ಸಾನಿಧ್ಯವಿದ್ದು ಈ ಹಿಂದೆ ತಮಗೆ ಕಷ್ಟ ಬಂದಿದ್ದಾಗ ಇಬ್ಬರೂ ಈ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅದರಿಂದ ಇಬ್ಬರಿಗೂ ಒಳಿತಾಗಿದ್ದು ಇದೀಗ ಬಂದು ತಮ್ಮ ಹರಕೆ ತೀರಿಸಿದ್ದಾರೆ.ಉಳಿದವರು ಕಂಡಂತೆ ಸಿನಿಮಾ ಸಂದರ್ಬದಲ್ಲಿ ಹುಲಿವೇಷ ತಂಡದ ಹುಡುಕಾಟದಲ್ಲಿದ್ದಾಗ ನಟ ರಕ್ಷಿತ್ ಶೆಟ್ಟಿ ಬೈಲೂರಿನ ಹುಲಿವೇಷ ತಂಡವನ್ನು ಆಯ್ಕೆ ಮಾಡಿದ್ದರು. ಸಿನೆಮಾ ಶೂಟಿಂಗ್ ಸಂದರ್ಬದಲ್ಲಿ ವಿಪರೀತ ಮಳೆಯಿಂದಾಗಿ ಶೂಟಿಂಗ್ ಮುಂದುವರೆಸಲು ಸಾಧ್ಯವಾಗಿರಲಿಲ್ಲ.ಮಾತ್ರವಲ್ಲದೇ ಅನೇಕ ಸಮಸ್ಯೆ ಎದುರಾಗಿದ್ದವು.ಆಗ ಅಲ್ಲಿದ್ದ ಹಿರಿಯರು ಬೈಲೂರಿನಲ್ಲಿರುವ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಿದ್ದರು. ನಂತರ ವೃಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದ್ದರು. ಇದರ ನಂತರ ಪವಾಡ ಎಂಬತೆ ಮಳೆ ಮಾಯವಾಗಿ ಶೂಟಿಂಗ್ ನಿರಾತಂಕವಾಗಿ ಸಾಗಿತ್ತು. ಇದಾದ ನಂತರ ಎಲ್ಲಾ ಸಮಸ್ಯೆ ಎದುರಾದಾಗ, ಚಿತ್ರದ ಸಕ್ಸಸ್ ಗಾಗಿ ಬೈಲೂರಿನ ಕೊರಗಜ್ಜನ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ತಮ್ಮ ಜೀವನದಲ್ಲಿ ಆದ ಬದಲಾವಣೆಗೆ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಇಬ್ಬರೂ ಹರಕೆಯನ್ನ ತೀರಿಸಿದ್ದಾರೆ. ಇಲ್ಲಿರುವ ಜ್ಯೂನಿಯರ್ ಪ್ರೆಂಡ್ಸ್ ಕೊರಂಗ್ರಪಾಡಿ ಹುಲಿವೇಷ ತಂಡದೊಂದಿಗೆ ಹುಲಿವೇಷ ಸ್ಟೆಪ್ ಹಾಕಿದ್ದ ನಟ ರಕ್ಷಿ ಶೆಟ್ಟಿ ನಂತರ ಕೊರಗಜ್ಜನಿಗೆ ಪೂಜೆ ಸಲ್ಲಿಸಿದ್ದಾರೆ. ವೃಷಬ್ ಶೆಟ್ಟಿ ರಾತ್ರೋರಾತ್ರಿ ಬಂದು ಕೊರಗಜ್ಜನಿಗೆ ತಮ್ಮ ಹರಕೆ ಸಲ್ಲಿಸಿದ್ದಾರೆ.ಕೊರಗಜ್ಜನ ಕಾರ್ಣಿಕ ಎಲ್ಲಾ ಕಡೆ ತೋರಿಬರುತ್ತಿದೆ. ನಟರ ಬಾಳಿನಲ್ಲೂ ಕೊರಗಜ್ಜನ ಚಮತ್ಕಾರವಾಗುತ್ತಿದೆ. ಕರಾವಳಿಯಲ್ಲಿ ಕೊರಗಜ್ಜನ ಆರಾಧನೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಕೊರಗಜ್ಜನ ಮಹಿಮೆಯೇ ಸಾಕ್ಷಿ.. ವೃಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕ್ಷೇತ್ರಕ್ಕೆ ಬಂದು ತಮ್ಮ ಹರಕೆ ಸಲ್ಲಿಸಿ ಕೊರಗಜ್ಜನ ಮಹಿಮೆಗೆ ಸಾಕ್ಷಿಬೂತರಾಗಿದ್ದಾರೆ.

Related posts

Leave a Reply

Your email address will not be published. Required fields are marked *