Header Ads
Breaking News

ಕೊರೊನಾ ನಿಗಾ ಕೇಂದ್ರ ಸ್ಥಾಪನೆಗೆ ವಿರೋಧ; ಹೋರಾಟಕ್ಕೆ ಸಜ್ಜಾದ ಕರಿಂಜೆ ಗ್ರಾಮಸ್ಥರು

ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕರಿಂಜೆ ಗ್ರಾಮದಲ್ಲಿ ಸರ್ಕಾರದಿಂದ ಕೊರನ ನಿಗಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದ್ದು, ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕರಿಂಜೆ ಗ್ರಾಮದ ಕಕ್ಕೆಬೆಟ್ಟು-ಕಜೆಬೈಲು ಎಂಬಲ್ಲಿ ಜೆರಾಲ್ಡ್ ಕ್ರಾಸ್ತಾ ಅವರ ಒಡೆತನಕ್ಕೆ ಸೇರಿರುವ ಖಾಲಿಯಿರುವ ಕಟ್ಟಡದಲ್ಲಿ ಕೊರೊನ ವಿದೇಶದಿಂದ ಅಥವಾ ಕೊರೆನೊ ಹರಡಿದೆಯೇ ಎಂದು ತಪಾಸಣೆ ಮಾಡವ ಮೊದಲು ನಿಗಾವಿರಿಸಲು ಚಿಕಿತ್ಸಾ ಕೇಂದ್ರವನ್ನು ತೆರೆಯಲು ನಿರ್ಧರಿಸಲಾಗಿದೆ.

ಕೇಂದ್ರಕ್ಕೆ ಮೂಡುಬಿದಿರೆ ತಹಸೀಲ್ದಾರ್ ಅನಿತಾಲಕ್ಷ್ಮೀ ಭೇಟಿ ನೀಡಿದ್ದು, ಈ ಸಂದರ್ಭ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು, ಕೇಂದ್ರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಸಮ್ಮತಿ ಇಲ್ಲದಿದ್ದರೆ ಕೇಂದ್ರ ಸ್ಥಾಪಿಸಲು ಇಲ್ಲಿ ಅವಕಾಶ ಕೊಡುವುದಿಲ್ಲ ಎಂದು ಕಟ್ಟಡದ ಮಾಲೀಕ ಜೆರಾಲ್ಡ್ ಕ್ರಾಸ್ತ ತಹಸೀಲ್ದಾರಿ ಅವರಿಗೆ ತಿಳಿಸಿದ್ದು, ಈ ಸಂದರ್ಭ ತಹಶೀಲ್ದಾರ್ ಅವರು ಜೆರಾಲ್ಡ್ ಕ್ರಾಸ್ತಾ ಹಾಗೂ ಗ್ರಾಮಸ್ಥರೊಂದಿಗೆ ಉದ್ದಟತನದಿಂದ ವರ್ತಿಸಿದ್ದಾರೆ.

ಸಭೆಗೆ ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿಯವರನ್ನು ಆಹ್ವಾನಿಸಲಾಗುವುದು ಕರಿಂಜೆ ಘನತ್ಯಾಜ್ಯ ಘಟಕದಿಂದ ನಾವು ನಿತ್ಯ ತೊಂದರೆ ಅನುಭವಿಸುತ್ತಿದ್ದೇವೆ. ಇದು ಜನವಸತಿ ಪ್ರದೇಶ. ಕೊರೊನಾ ಸೋಂಕಿತರನ್ನು ಇಲ್ಲಿನ ಕಟ್ಟಡಕ್ಕೆ ಕರೆತರುವುದಕ್ಕೆ ನಾವು ಬಿಡುವುದಿಲ್ಲ. ಕಟ್ಟಡದ ಮಾಲೀಕರು ಕೂಡ ಈ ಕಟ್ಟಡವನ್ನು ತಹಸೀಲ್ದಾರ್ ಸುಪರ್ದಿಗೆ ನೀಡುವುದಿಲ್ಲ ಎಂದಿದ್ದಾರೆ. ನಮ್ಮ ವಿರೋಧದದ ನಡುವೆಯೂ ತಹಸೀಲ್ದಾರ್ ಅಂತದ್ದೇನಾದರು ನಿರ್ಧಾರ ಕೈಗೊಂಡರೆ ಗ್ರಾಮಸ್ಥರು ಸಾಮೂಹಿಕ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದ್ದಾರೆ. ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್, ಸ್ಥಳೀಯರಾದ ಐ.ವಿ ಕ್ರಾಸ್ತಾ, ಚಾಲ್ರ್ಸ್ ಕ್ರಾಸ್ತಾ, ನಿವೃತ್ತ ಸೈನಿಕ ವಿನ್ಸೆಂಟ್ ಪಿಂಟೋ, ಯಶೋಧರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *