Header Ads
Breaking News

ಕೊರೊನಾ ಭೀತಿಯ ನಡುವೆ ಆನ್‍ಲೈನ್ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್

ಕೊರೊನಾ ಭೀತಿಯ ನಡುವೆ ರಾಜ್ಯ ಸರಕಾರ ಆನ್‍ಲೈನ್ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವುದು ರಾಜ್ಯದಲ್ಲಿ ಬಡ ಮಕ್ಕಳಿಗೆ ದುಬಾರಿಯಾಗಿ ಪರಿಣಮಿಸಿದೆ. ಸ್ಮಾರ್ಟ್ ಫೋನ್, ಲ್ಯಾಪ್‍ಟಾಪ್, ಕಂಪ್ಯೂಟರ್ ಇಲ್ಲದ ಬಡ ಮಕ್ಕಳು ಆನ್ ಲೈನ್ ಶಿಕ್ಷಣ ಪಡೆಯೋದು ಹೇಗೆಂಬ ಚಿಂತೆಯಲ್ಲಿದ್ದಾರೆ. ಮಂಗಳೂರು ನಗರ ಹೊರವಲಯದ ಕುಡುಪು ಎಂಬಲ್ಲಿ ವಾಸ ಇರುವ ಬಾಗಲಕೋಟೆ ಮೂಲದ ಬಡ ಕುಟುಂಬದ ಬಾಲಕಿಯೋರ್ವಳು ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಈಗ ಆನ್ ಲೈನ್ ತರಗತಿಗಳು ಆರಂಭಗೊಂಡಿದ್ದು ಸ್ಮಾರ್ಟ್ ಫೋನ್ ಇಲ್ಲದೆ ಆನ್ ಲೈನ್ ಕಲಿಕೆ ಹೇಗೆ ಎನ್ನುವ ಆತಂಕದಲ್ಲಿದ್ದಾಳೆ. ವರ್ಷದ ಹಿಂದೆ ತಂದೆ ತೀರಿಕೊಂಡಿದ್ದು ತಾಯಿ ಬೇರೆ ಕಡೆ ಮನೆ ಕೆಲಸ ಮಾಡಿಕೊಂಡು ಮಕ್ಕಳಿಗೆ ಓದಿಸುತ್ತಿದ್ದಾರೆ. ಆದರೆ ಈಗ ಚಿಕ್ಕ ಮೊಬೈಲ್ ಇಟ್ಟುಕೊಂಡು ಆನ್ ಲೈನ್ ಓದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. ಬಾಡಿಗೆ ಮನೆಯಲ್ಲಿರುವ ಈ ಕುಟುಂಬದಲ್ಲಿ ಮೂರು ಮಕ್ಕಳಿದ್ದು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ರಾಜ್ಯ ಸರಕಾರದ ಆನ್ಲೈನ್ ಶಿಕ್ಷಣ ಮತ್ತೊಂದು ಸಂಕಷ್ಟ ತಂದಿತ್ತಿದೆ. ಹೊಸ ಮೊಬೈಲ್ ಕೊಳ್ಳಲೆಂದು ಸಹಕಾರಿ ಬ್ಯಾಂಕಿಗೆ ಸಾಲಕ್ಕೆ ಹೋದರೆ ಅಲ್ಲಿಯೂ ಬೆಂಬಲ ಸಿಕ್ಕಿಲ್ಲ. ಹೀಗಾಗಿ ರಾಜ್ಯ ಸರಕಾರ ಬಡ ಮಕ್ಕಳಿಗೆ ಏನಾದ್ರೂ ವ್ಯವಸ್ಥೆ ಮಾಡಬೇಕೆಂದು ಬಾಲಕಿ ಮತ್ತು ಆಕೆಯ ತಾಯಿ ಅಲವತ್ತುಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *