Header Ads
Breaking News

ಕೊರೊನಾ ಭೀತಿ ಹಿನ್ನೆಲೆ ಲಾಕ್ ಡೌನ್ : ಕಾರ್ಕಳದ ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತ ಆಹಾರ ಕೊಡದ ಸಿಬ್ಬಂದಿ

ಕಾರ್ಕಳ. ರಾಜ್ಯದಲ್ಲಿಕರೋನ ವೈರಸ್ ಹರಡಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ನಲ್ಲಿ ಬಡ ಕಾರ್ಮಿಕರಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟವನ್ನು ಉಚಿತವಾಗಿ ನೀಡಬೇಕೆಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಯವರು ಘೋಷಣೆ ಮಾಡಿದರು. ಆದರೆ ಕಾರ್ಕಳದ ಇಂದಿರಾ ಕ್ಯಾಂಟೀನಿಗೆ ಬಂದವರಿಂದ ಹಣ ಪಡೆದುಕೊಳ್ಳುವ ದೃಶ್ಯ ಕಂಡುಬಂತು. ಇಲ್ಲಿಯ ಸಿಬ್ಬಂದಿಗಳ ಬಳಿ ವಿಚಾರಿಸಿದಾಗ ನಮಗೇನು ಜಿಲ್ಲಾಧಿಕಾರಿ ಆಗಲಿ ಸ್ಥಳೀಯ ಆಡಳಿತದಿಂದ ಆಗಲಿ ಯಾವುದೇ ಮಾಹಿತಿ ಇಲ್ಲ. ಎಂದು ಮಾಧ್ಯಮ ತಿಳಿಸಿದರು. ನಂತರ ಪುರಸಭೆಯ ಪರಿಸರ ಅಭಿಯಂತರ ಬಳಿ ವಿಚಾರಿಸಿದಾಗ ನಮಗೆ ಯಾರಿಗೂ ಉಚಿತವಾಗಿ ಊಟ-ತಿಂಡಿ ಕೊಡದ ಹಾಗೆ ಸುತ್ತೋಲೆ ಬಂದಿದೆ ಹೇಳುತ್ತಾರೆ. ಈ ರೀತಿಯ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *