Header Ads
Breaking News

ಕೊರೊನಾ ಮಹಾಮಾರಿ ಭೀತಿ ಹಿನ್ನೆಲೆ : ಸಹಕಾರಿ ಬ್ಯಾಂಕ್‍ನಿಂದ ಜಾಗೃತಿ ಕಾರ್ಯಕ್ರಮ

ಮಂಜೇಶ್ವರ: ಕೊರೊನಾ ವಿರುದ್ಧ ಕೇರಳ ರಾಜ್ಯ ಸರ್ಕಾರ ಹಾಗು ಆರೋಗ್ಯ ಇಲಾಖೆ ಆರಂಭಿಸಿರುವ ಜಾಗೃತಿ ಮಹಾ ಸಪ್ತಾಹಕ್ಕೆ ಬೆಂಬಲ ಸೂಚಿಸಿ ಮಂಜೇಶ್ವರ ಸಹಕಾರಿ ಬ್ಯಾಂಕ್‍ನ ನೇತೃತ್ವದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಆರಂಭಿಸುವುದಾಗಿ ಅಧ್ಯಕ್ಷ ಬಿ.ವಿ.ರಾಜನ್ ಹೇಳಿದರು. ಇದರ ಅಂಗವಾಗಿ ಬ್ಯಾಂಕ್‍ನ ಆರು ಶಾಖೆಗಳಿಗೆ ಸಂದರ್ಶನ ನೀಡುವ ಗ್ರಾಹಕರಿಗೆ ಕೈ ಶುಚೀಕರಿಸಲು ನೀರು ಹಾಗು ಹ್ಯಾಂಡ್ ವಾಷ್ ಲಿಕ್ವಿಡ್ ಶಾಖೆಯನ್ನು ಪರಿಸರದಲ್ಲಿ ಸ್ಥಾಪಿಸಲಾಯಿತು.

ಜೊತೆಗೆ ಕೇರಳ ಸರ್ಕಾರದ ಆರೋಗ್ಯ ಇಲಾಖೆ ನಿರ್ದೇಶಿಸಿದ ಪ್ರಧಾನ ಜಾಗೃತ ವಿಷಯಗಳನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಿ ಕೊಡಲು ವಿವರವಾದ ಕರಪತ್ರವನ್ನು ಕನ್ನಡ, ಮಲಯಾಳ ಭಾಷೆಯಲ್ಲಿ ಮುದ್ರಿಸಿ ವ್ಯಾಪಕವಾಗಿ ವಿತರಿಸಿ ಜನರಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯಕ್ರಮವನ್ನು ಆರಂಭಿಸಲು ನಿರ್ಧರಿಸಿದೆ. ಸರ್ಕಾರದ ಆರೋಗ್ಯ ಇಲಾಖೆಯಿಂದ ಹೊರಡಿಸುವ ಎಲ್ಲಾ ನಿರ್ದೇಶಗಳನ್ನು ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ತಲುಪುವಂತೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಬ್ಯಾಂಕ್ ಅಧಿಕೃತರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಬ್ಯಾಂಕ್ ಕಾರ್ಯದರ್ಶಿ ರಾಜನ್ ನಾಯರ್, ಶ್ರೀಧರ್, ಶಿವ ಪ್ರಕಾಶ್ ಬಳ್ಲಾಲ್, ಗೀತಾ ರಾಧಾ ಕ್ರಷ್ಣ, ಸುಧಾಕರ ಪಟ್ಲ, ಪ್ರಧೀಶ್ ಮೊದಲಾದವರು ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *