Header Ads
Breaking News

ಕೊರೊನಾ ಸೋಂಕಿತ ವ್ಯಕ್ತಿ ಮನೆಯಲ್ಲೇ – ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಜನಾಕ್ರೋಶ

ಕೊರೊನಾ ಸೋಂಕು ಪಾಸಿಟಿವ್ ಬಂದ ವ್ಯಕ್ತಿಯನ್ನು 24 ಗಂಟೆ ಕಳೆದರೂ ಆಸ್ಪತ್ರೆಗೆ ಸಾಗಿಸದ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಿಂದ ಬಂದು 14 ದಿನ ಕ್ವಾರೆಂಟೈನ್‍ಗೆ ಒಳಪಟ್ಟು ಮನೆಗೆ ಬಂದ ವ್ಯಕ್ತಿಗೆ ಸೋಂಕು ದೃಢವಾದ ವರದಿ ಬಂದ ಹಿನ್ನೆಲೆ ಉಚ್ಚಿಲ ಪೋಲ್ಯ ರಸ್ತೆಯಲ್ಲಿರುವ ಅವರ ವಾಸದ ಅಪಾರ್ಟ್ಮೆಂಟ್‍ನ್ನು ಸೀಲ್‍ಡೌನ್ ಮಾಡಲಾಗಿದೆ. ಆದರೆ ಇದುವರೆಗೆ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿಲ್ಲ. ಅಲ್ಲದೆ ಅವರಿಗೆ ನಿನ್ನೆ ರಾತ್ರಿಯಿಂದ ಹೊಟ್ಟೆಗೆ ಅನ್ನ ಅಹಾರ ನೀಡಿಲ್ಲ. ನಮ್ಮನ್ನು ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ನೋಡಲು ಬಂದಿಲ್ಲ ಎಂದು ಅವರ ಪತ್ನಿ ಆರೋಪಿಸಿದ್ದಾರೆ.ಇಲಾಖೆಯ ಮಾಹಿತಿಯಂತೆ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿರುವುದಾಗಿ ಪತ್ರಿಕೆಯಲ್ಲಿ ವರದಿಯಾಗಿತ್ತು. ಈ ಬಗ್ಗೆ ಮಾತನಾಡಿದ ಸ್ಥಳೀಯ ತಾ.ಪಂ ಸದಸ್ಯ ಶೇಖಬ್ಬ, ನಿನ್ನೆಯಿಂದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ.ಅವರಿಗೆ ಅಹಾರದ ವ್ಯವಸ್ಥೆಯನ್ನು ಮಾಡಿಲ್ಲ. ನಮಗೆ ಬೆಳಿಗ್ಗೆ ವಿಷಯ ಸಿಕ್ಕಿದ ಕೂಡಲೇ ನಾವು ಬೆಳಿಗ್ಗಿನ ಉಪಹಾರ ನೀಡಿದ್ದೇವೆ.ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದಿದ್ದಾರೆ.

ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿ, ನಾವು ಆ ಸೋಂಕಿತರಿರುವ ಮನೆಯನ್ನು ಸೀಲ್ ಡೌನ್ ಮಾಡಿದ್ದೇವೆ. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಬಿ.ಬಿ. ರಾವ್ ಗೆ ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸೂಚನೆ ನೀಡಿದ್ದೇವೆ. ನಿನ್ನೆಯೇ ಸಾಗಿಸ ಬೇಕಾಗಿದ್ದು ಈ ಬಗ್ಗೆ ವಿಚಾರಿಸುತ್ತೇನೆ ಎಂದಿದ್ದಾರೆ.

Related posts

Leave a Reply

Your email address will not be published. Required fields are marked *